ಕೆಮ್ಮು ದಮ್ಮಿಂದ ದೂರವಾಗಲು ಸರಳ ಮನೆಮದ್ದು

ಶುಕ್ರವಾರ, 24 ಜನವರಿ 2014 (09:45 IST)
PR
ಚಳಿಗಾಲದಲ್ಲಿ ತಂಪಾದ ವಾತಾವರಣವು ನೆಗಡಿ ಮತ್ತು ಕೆಮ್ಮು ಹೆಚ್ಚು ಮಾಡುತ್ತದೆ. ಅದರಿಂದ ದೂರವಾಗಲು ಕೆಲವು ಮನೆ ಮದ್ದು ಇಲ್ಲಿವೆ. ಅದನ್ನು ಉಪಯೋಗಿಸಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ

ಅರಿಸಿಣದ ಕೊಂಬನ್ನು ಹುರಿದು ಪುಡಿ ಮಾಡಿ ಜೇನುತುಪ್ಪದೊಂದಿಗೆ ಮಿಶ್ರ ಮಾಡಿ ದಿನದಲ್ಲಿ ಮೂರುಬಾರಿ ಸೇವಿಸಿ. ಕುದಿಯುವ ನೀರಿಗೆ ಅರಿಷಿಣ ಹಾಕಿ ಆವಿ ತೆಗೆದುಕೊಳ್ಳುವುದರಿಂದ ಕೆಮ್ಮು ಹಾಗೂ ಶೀತ ದೂರವಾಗುತ್ತದೆ.

5 ಎಂಎಲ್ ಈರುಳ್ಳಿ ರಸಕ್ಕೆ 10 ಎಂಎಲ್ ಜೇನುತುಪ್ಪ ಸೇರಿಸಿ ಸೇವಿಸಿದರೆ ಕೆಮ್ಮು ಮಾಯ.

ಒಂದಷ್ಟು ಬೆಳ್ಳುಳ್ಳಿ ಎಸಳುಗಳನ್ನು ನೀರಿನಲ್ಲಿ ಕುದಿಸಿ .ಅದಕ್ಕೆ ನಿಂಬೆರಸ ಹಾಗೂ ಜೇನುತುಪ್ಪ ಸೇರಿಸಿದರೆ ಕೆಮ್ಮು ನಿವಾರಣೆ ಆಗುತ್ತದೆ.

ಒಣದ್ರಾಕ್ಷಿಯನ್ನು ತೊಳೆದು ರುಬ್ಬಿ ಅದಕ್ಕೆ ನೀರು ಹಾಗೂ ಸಕ್ಕರೆ ಸೇರಿಸಿ ಬಿಸಿ ಮಾಡಿ ಕುಡಿಯಿರಿ. ಕೆಮ್ಮು ಕಡಿಮೆಯಾಗುತ್ತದೆ.

1/4 ಕಪ್ ನೀರಿಗೆ ಎರಡು ಚಮಚ ಜೇನು .ಲಿಂಬೆ ರಸ ,ದಾಲ್ಚಿನ್ನಿ ಚಕ್ಕೆ ಹಾಗೂ ಒಂದು ನೀಲಗಿರಿ ಎಲೆ ಸೇರಿಸಿ ಸೇವಿಸಿ ಕೆಮ್ಮು ನಿವಾರಣೆ ಆಗುತ್ತದೆ.

ಮಕ್ಕಳಲ್ಲಿ ಕಾಣಿಸುವ ಕೆಮ್ಮಿಗೆ ಸಾಸಿವೆ ಎಣ್ಣೆ ಹೆಚ್ಚು ಪರಿಣಾಮಕಾರಿ. ಎಣ್ಣೆಯನ್ನು ಮಕ್ಕಳ ಎದೆಗೆ ಹಚ್ಚಿ ತಿಕ್ಕಿ.

ಕೃಷ್ಣ ತುಳಸಿ ಎಲೆಗಳನ್ನು ಜಜ್ಜಿ ರಸಹಿಂಡಿ ಅದಕ್ಕೆ ಒಂದು ಹನಿಯಷ್ಟು ಜೇನುತುಪ್ಪು ಬೆರಸಿ ಸೇವಿಸಿದರೂ ಕೆಮ್ಮು ದೂರವಾಗುತ್ತದೆ.

ವೆಬ್ದುನಿಯಾವನ್ನು ಓದಿ