ಬೆಂಗಳೂರು : ವರಮಹಾಲಕ್ಷ್ಮೀ ಪೂಜೆ ಮಾಡಲು ದೇವಿಗೆ ಹಲವು ಬಗೆಯ ನೈವೇದ್ಯವನ್ನು ಇಡುತ್ತಾರೆ. ಅದರಲ್ಲಿ ಬಹಳ ಸರಳವಾಗಿ ಸುಲಭವಾಗಿ ತಯಾರಾಗುವಂತಹುದು ಅವಲಕ್ಕಿ ಪಂಚಕಜ್ಜಾಯಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಒಂದು ಪಾತ್ರೆಯಲ್ಲಿ 2 ಚಮಚ ಬೆಲ್ಲ, 2 ಚಮಚ ಕೊಬ್ಬರಿ ತುರಿ ಹಾಕಿ ಮಿಕ್ಸ್ ಮಾಡಿ. ಇದಕ್ಕೆ ತೆಳು ಅವಲಕ್ಕಿ ಹಾಕಿ ಮಿಕ್ಸ್ ಮಾಡಿ. ಬಳಿಕ ಅದಕ್ಕೆ 1 ಚಮಚ ತುಪ್ಪ, 1 ಚಮಚ ಜೇನುತುಪ್ಪ, ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿದರೆ ಅವಲಕ್ಕಿ ಪಂಚಕಜ್ಜಾಯ ರೆಡಿ.