ಸಕ್ಕರೆಕಾಯಿಲೆ ಇರುವವರು ಸೇಬು ತಿನ್ನಬಹುದಾ?

ಶನಿವಾರ, 13 ನವೆಂಬರ್ 2021 (08:41 IST)
ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಎನ್ನುವುದು ದೀರ್ಘಕಾಲ ಕಾಡುವಂತಹ ಒಂದು ಮಾರಕ ಆರೋಗ್ಯ ಸಮಸ್ಯೆ.
ಇದರಲ್ಲಿ ದೇಹದ ಆರೋಗ್ಯ ಹಲವಾರು ಆಯಾಮಗಳಲ್ಲಿ ತೊಂದರೆಗೆ ಗುರಿಯಾಗುತ್ತದೆ. ಪ್ರತಿದಿನದ ನಮ್ಮ ಆಹಾರ ಪದ್ಧತಿ ಕೂಡ ಇದರಿಂದ ಬದಲಾಗುತ್ತದೆ. ಕೆಲವೊಮ್ಮೆ ನಾವು ತಿನ್ನುವಂತಹ ಆಹಾರ ಪದಾರ್ಥಗಳನ್ನು ಆಲೋಚನೆ ಮಾಡಿ ತಿನ್ನಬೇಕಾಗುತ್ತದೆ.
ಕೇವಲ ಹೊರಗಿನ ಸಿಹಿ ಪದಾರ್ಥಗಳು ಮಾತ್ರವಲ್ಲದೆ ಕೆಲವೊಮ್ಮೆ ನಾವು ಹಣ್ಣುಗಳನ್ನು ಕೂಡ ಅನುಮಾನದಿಂದ ನೋಡಬೇಕಾಗುತ್ತದೆ. ಇವುಗಳಲ್ಲಿ ನೈಸರ್ಗಿಕ ರೂಪದ ಅತಿ ಹೆಚ್ಚು ಸಕ್ಕರೆ ಅಂಶ ಇರುವ ಕಾರಣ ನಮ್ಮ ದೇಹದ ಆರೋಗ್ಯಕ್ಕೆ ಅಪ್ಪಿತಪ್ಪಿ ತೊಂದರೆ ಉಂಟಾಗುವ ಸಾಧ್ಯತೆ ಇದೆಯೇ ಎಂಬ ಬಗ್ಗೆ ಆಲೋಚನೆ ಮಾಡಬೇಕಾಗುತ್ತದೆ.
ಡಯಾಬಿಟಿಸ್

ಇದರಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಅಂಶ, ನಾರಿನ ಅಂಶ ಮತ್ತು ಸಾಕಷ್ಟು ಆಂಟಿಆಕ್ಸಿಡೆಂಟ್ ಅಂಶಗಳು ಹೇರಳವಾಗಿ ಕಂಡುಬರುತ್ತವೆ. ಹೀಗಾಗಿ ಸೇಬು ಹಣ್ಣು ಒಂದು ಪೌಷ್ಟಿಕಾಂಶಗಳನ್ನು ಒಳಗೊಂಡ ಅದ್ಭುತ ಹಣ್ಣು ಎಂದು ಹೇಳಬಹುದು. ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ನಾರಿನ ಅಂಶ ಮತ್ತು ನಿರ್ಜಲೀಕರಣ ಸಮಸ್ಯೆಯನ್ನು ತಡೆ ಹಾಕುವಂತಹ ನೀರಿನ ಅಂಶ ಸೇಬು ಕಣ್ಣಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಹೆಚ್ಚಿನ ನಾರಿನ ಅಂಶ ಒಳಗೊಂಡ ಸೇಬು ಹಣ್ಣು ಹೃದಯಕ್ಕೆ ಒಳ್ಳೆಯದು, ರಕ್ತದ ಒತ್ತಡದ ಸಮಸ್ಯೆ ಇರುವವರಿಗೆ ಒಳ್ಳೆಯದು ಅದೇ ರೀತಿ ರಕ್ತ ನಾಳಗಳ ಉರಿಯೂತವನ್ನು ಕಡಿಮೆ ಮಾಡುವಲ್ಲಿ ಹೆಚ್ಚಿನ ಪಾತ್ರ ವಹಿಸುತ್ತದೆ. ಹೀಗಾಗಿ ನಾರಿನ ಅಂಶ ಹೆಚ್ಚಾಗಿರುವ ಸೇಬು ಹಣ್ಣು ಮಧುಮೇಹ ಇರುವವರಿಗೆ ಒಳ್ಳೆಯದು ಎಂದು ಹೇಳಬಹುದು.
ಪೌಷ್ಟಿಕ ಸತ್ವ
ಸೇಬು ಕಣ್ಣಿನಲ್ಲಿ ಪಾಲಿಫಿನಾಲ್ ಅಂಶ ಹೆಚ್ಚಾಗಿರುವ ಕಾರಣ, ಮಧುಮೇಹ ನಿರ್ವಹಣೆಯಲ್ಲಿ ಇದು ಹೆಚ್ಚಾಗಿ ಸಹಾಯ ಮಾಡುತ್ತದೆ. ಪಾಲಿಫಿನಾಲ್ ಅಂಶಗಳು ನಮ್ಮ ರಕ್ತದಲ್ಲಿನ ಸಕ್ಕರೆ ಅಂಶವನ್ನು ಉತ್ತಮವಾಗಿ ಸಂಸ್ಕರಣೆ ಮಾಡುತ್ತವೆ.
ಕಾರ್ಬೋಹೈಡ್ರೇಟ್ ಅಂಶಗಳು ನಮ್ಮ ದೇಹದಲ್ಲಿ ಹೆಚ್ಚಾಗಿ ಜೀರ್ಣಗೊಂಡು ಬೇರೆ ಯಾವುದೇ ಹೊಟ್ಟೆಗೆ ಸಂಬಂಧಪಟ್ಟಂತೆ ಸಮಸ್ಯೆಗಳು ಕಂಡು ಬರದಂತೆ ನೋಡಿಕೊಳ್ಳಲು ಸಹಾಯವಾಗುತ್ತದೆ. ಇದರಿಂದ ದೇಹದ ತೂಕ ನಿಯಂತ್ರಣವಾಗಿ ಹೃದಯರಕ್ತನಾಳದ ಕಾಯಿಲೆಗಳು ಪರಿಹಾರವಾಗುತ್ತವೆ.
ಆಂಟಿಆಕ್ಸಿಡೆಂಟ್
ನಮ್ಮ ದೇಹದ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡಲು ಆಂಟಿಆಕ್ಸಿಡೆಂಟ್ ಅಂಶಗಳ ಅವಶ್ಯಕತೆ ಖಂಡಿತ ಇದೆ. ಹೀಗಾಗಿ ಫ್ರೀ ರಾಡಿಕಲ್ ಅಂಶಗಳು ನಮ್ಮ ದೇಹದಲ್ಲಿ ಆಹಾರವನ್ನು ಸರಿಯಾಗಿ ಜೀರ್ಣವಾಗಲು ಬಿಡುವುದಿಲ್ಲ.
ಮಧುಮೇಹ
ಸೇಬು ಹಣ್ಣಿನಲ್ಲಿ ಆರೋಗ್ಯಕರವಾದ ಮತ್ತು ದೇಹಕ್ಕೆ ಅವಶ್ಯಕವಾದ ಸಾಕಷ್ಟು ಪೌಷ್ಟಿಕ ಸತ್ವಗಳು ಸಿಗುತ್ತವೆ. ಇವುಗಳಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಅಂಶಗಳು, ಖನಿಜಾಂಶಗಳು, ಆಂಟಿಆಕ್ಸಿಡೆಂಟ್ ಅಂಶಗಳು, ನಾರಿನ ಅಂಶ ಮತ್ತು ಇದರ ಜೊತೆಗೆ ಸಕ್ಕರೆ ಅಂಶ ನಿರ್ವಹಣೆ ಮಾಡುವ ಪಾಲಿಫಿನಾಲ್ ಅಂಶಗಳು ಸಾಕಷ್ಟು ಸಿಗುತ್ತವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ