ಬೆಂಗಳೂರು : ಕಾರ್ನ್ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಲ್ಲಿ ಸಾಕಷ್ಟು ಪ್ರಮಾಣದ ಫೈಬರ್ ಇದೆ. ಆದರೆ ಇದನ್ನು ಗರ್ಭಿಣಿಯರು ಸೇವಿಸಬಹುದೇ ಎಂಬುದನ್ನು ತಿಳಿದುಕೊಳ್ಳಿ.
ಕಾರ್ನ್ ಸೇವಿಸಿ ನಮ್ಮ ಆರೋಗ್ಯ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಕಾರ್ನ್ ಗೆ ಸ್ವಲ್ಪ ಉಪ್ಪು ಮತ್ತು ಮೆಣಸಿನ ಕಾಳಿನ ಪುಡಿ ಸೇರಿಸಿ ತಿಂದರೆ ಚಳಿಗಾಲದಲ್ಲಿ ಕಾಡುವ ಶೀತ, ಕಫದ ಸಮಸ್ಯೆ ದೂರವಾಗುತ್ತದೆ. ಜೋಳ ಬೇಯಿಸಿದ ನೀರಿನ ಹಬೆ ತೆಗೆದುಕೊಳ್ಳುವುದರಿಂದ ಶೀತದಿಂದ ಕಟ್ಟಿದ ಮೂಗು ತೆರೆದುಕೊಳ್ಳುತ್ತದೆ.
ಆದರೆ ಗರ್ಭಿಣಿಯರು ಕಾರ್ನ್ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ. ಏಕೆಂದರೆ ಇದನ್ನು ಸೇವಿಸುವುದರಿಂದ ಕೆಲವರಿಗೆ ಗರ್ಭಪಾತವಾಗುವ ಸಂಭವವಿದೆ.