ಆತ್ಮರತಿ ಮಾಡುತ್ತಾ ನನಗೀಗ ಉದ್ರೇಕದ ಸಮಯದಲ್ಲಿ ಹೀಗಾಗುತ್ತಿದೆ!

ಮಂಗಳವಾರ, 10 ಸೆಪ್ಟಂಬರ್ 2019 (09:03 IST)
ಬೆಂಗಳೂರು: ಆತ್ಮರತಿ ಮಾಡುವುದು ಏಕಾಂಗಿಯಾಗಿ ಲೈಂಗಿಕ ಬಯಕೆ ತೀರಿಸಿಕೊಳ್ಳುವ ಸಹಜ ಪ್ರಕ್ರಿಯೆ. ಇದರ ಬಗ್ಗೆ ಅನಗತ್ಯ ಆತಂಕ ಬೇಕಾಗಿಲ್ಲ.


ಆದರೆ ಕೆಲವರಿಗೆ ಹಲವು ಸಮಯದಿಂದ ಆತ್ಮರತಿ ಮಾಡುತ್ತಾ ಉದ್ರೇಕವಾದಾಗ ವೀರ್ಯಾಣು ಕಡಿಮೆ ಹೊರ ಹೊಮ್ಮುತ್ತದೆ ಎಂಬ ಆತಂಕ ಕಾಡುತ್ತದೆ. ಇದು ಬಹಳ ದಿನಗಳಿಂದ ಆತ್ಮರತಿ ಮಾಡುವುದರ ಪರಿಣಾಮ ಎಂಬ ಆತಂಕದಲ್ಲಿದ್ದರೆ ಅಂತಹ ಆತಂಕ ಬೇಕಾಗಿಲ್ಲ. ಅದಕ್ಕೂ ವೀರ್ಯಾಣು ಕಡಿಮೆಯಾಗುವುದಕ್ಕೂ ಸಂಬಂಧವಿಲ್ಲ.

ವೀರ್ಯಾಣು ಕಡಿಮೆಯಾಗಿದ್ದರೆ ಅದಕ್ಕೆ ಬೇರೆ ಕಾರಣಗಳಿರಬಹುದು. ಉತ್ತಮ ಪೋಷಕಾಂಶ ಭರಿತ ಆಹಾರ, ದೈಹಿಕ ವ್ಯಾಯಾಮ, ಆರೋಗ್ಯಕರ  ಅಭ್ಯಾಸಗಳ ಮೂಲಕ ವೀರ್ಯಾಣು ಸಂಖ್ಯೆ ವೃದ್ಧಿಸಿಕೊಳ್ಳಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ