ಔಷಧಿಯ ಗುಣಗಳು ಹೊಂದಿರುವ ಮೆಂತ್ಯದ ಕುರಿತು ನಿಮಗೆ ಗೊತ್ತೇ?

ಅತಿಥಾ

ಮಂಗಳವಾರ, 26 ಡಿಸೆಂಬರ್ 2017 (13:35 IST)
ಭಾರತದಲ್ಲಿ ಹೆಚ್ಚಾಗಿ ಬಳಸುವ ಮೆಂತ್ಯೆಯು ದಿನಬಳಕೆಯ ಆಹಾರ ಪದಾರ್ಥಗಳಲ್ಲಿ ಒಂದಾಗಿದ್ದು, ಇದು ಹಲವು ರೀತಿಯ ರೋಗಗಳಿಗೆ ಉಪಶಮನಕಾರಿಯಾಗಿದೆ. ಇದರ ಸೊಪ್ಪು ಮತ್ತು ಕಾಳುಗಳು ಬಹುಪಯೋಗಿ ಆಗಿದ್ದು, ಇದು ಹೇಗೆಲ್ಲಾ ಉಪಯೋಗಕಾರಿಯಾಗಿದೆ ಎಂದು ತಿಳಿಯುವ ಆಸಕ್ತಿ ನಿಮಗಿದೆಯೇ ಇಲ್ಲಿದೆ ವರದಿ.

ಮೆಂತ್ಯೆಯು ದೇಹಕ್ಕೆ ತಂಪುಕಾರಕವಾಗಿದ್ದು, ಆಯುರ್ವೇದದಲ್ಲಿ ಇದರ ಬಳಕೆ ಕುರಿತು ಉಲ್ಲೇಖಿಸಲಾಗಿದೆ. ಇದರ ಪ್ರಯೋಜನಗಳು ಸಾಕಷ್ಟಿದ್ದು ಅದರ ಕುರಿತು ತಿಳಿಯೋಣ.
 
1. ಇದು ದೇಹದಲ್ಲಿರುವ ವಿಷ ಪದಾರ್ಥವನ್ನು ತೆಗೆದುಹಾಕುವುದರೊಂದಿಗೆ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ.
 
2. ಮೆಂತ್ಯವನ್ನು ಜೇನುತುಪ್ಪ ಮತ್ತು ನಿಂಬೆಹಣ್ಣಿನ ರಸಹೊಂದಿಗೆ ತೆಗೆದುಕೊಳ್ಳುವ ಮೂಲಕ ಗಂಟಲ ನೋವು, ಜ್ವರ, ಕೆಮ್ಮು ನಿವಾರಿಸಿಕೊಳ್ಳಬಹುದಾಗಿದೆ.
 
3. ಮೆಂತ್ಯದಲ್ಲಿರುವ ಅಂಶವು ರಕ್ತದಲ್ಲಿ ಅಪಾಯಕಾರಿಯಾಗಿರುವ ಕೆಟ್ಟ ಕೊಲೆಸ್ಟ್ರಾಲ್ ತೆಗೆದುಹಾಕುವುದರಲ್ಲಿ ಸಹಾಯಕಾರಿಯಾಗಿದೆ. ಇದರಿಂದ ಹೃದಯ ಸಂಬಂಧಿ ತೊಂದರೆಗಳಿಂದ ನೀವು ಮುಕ್ತಿ ಹೊಂದಬಹುದು.
 
4. ಮೆಂತ್ಯವು ಬಾಣಂತಿಯರಿಗೆ ಬಹಳಷ್ಟು ಸಹಾಯಕವಾಗಿದ್ದು, ಇದರಲ್ಲಿರುವ ಡಯೋಸ್‌ಜೆನಿನ್ ಎಂಬ ಅಂಶವು ಸ್ತನದ ಹಾಲನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
 
5. ಮೆಂತ್ಯವು ತಲೆಯಲ್ಲಿರುವ ಹುಟ್ಟಿನ ಸಮಸ್ಯೆಯನ್ನು ನಿವಾರಿಸುವುದರ ಜೊತೆಗೆ ಕುದಲು ಬೆಳವಣಿಗೆಗೆ ತುಂಬಾನೇ ಸಹಾಯಕಾರಿಯಾಗಿದೆ.
 
6. ಮಧುಮೇಹದಿಂದ ಬಳಲುತ್ತಿರುವವರಿಗೆ ಮೆಂತ್ಯೆದ ಕಾಳುಗಳು ಹೆಚ್ಚು ಉಪಯೋಗಕಾರಿಯಾಗಿದ್ದು, ಇದರ ನಿಯಮಿತ ಸೇವನೆಯಿಂದ ದೇಹದಲ್ಲಿರುವ ಇನ್ಸುಲಿನ್ ಪ್ರಮಾಣವನ್ನು ಇದು ನಿಯಂತ್ರಿಸುತ್ತದೆ ಮತ್ತು ದೇಹದಲ್ಲಿರುವ ಸಕ್ಕರೆ ಪ್ರಮಾಣವನ್ನು ಸ್ಥಿಮಿತದಲ್ಲಿರಿಸುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ