ಅಕ್ಕಿ ತೊಳೆದ ನೀರಲ್ಲಿ ಎಷ್ಟೆಲ್ಲಾ ಲಾಭ ಇದೆ ಗೊತ್ತಾ...?

ಭಾನುವಾರ, 10 ಡಿಸೆಂಬರ್ 2017 (07:45 IST)
ಬೆಂಗಳೂರು: ಸಾಮಾನ್ಯವಾಗಿ ನಾವು ಅಕ್ಕಿ ತೊಳೆದ ನೀರನ್ನು ಗಲೀಜು ಎಂದು ಹೊರಗೆ ಎಸೆಯುತ್ತೇವೆ. ಆದರೆ ಇನ್ನು ಮೇಲೆ ಹಾಗೆ ಮಾಡಬೇಡಿ. ಏಕೆಂದರೆ ಈ ನೀರಿನಿಂದ ನಮಗೆ ಅನೇಕ ಉಪಯೋಗಗಳಿವೆ.


ಅಕ್ಕಿ ತೊಳೆದ ನೀರಲ್ಲಿ ಕೂದಲು ತೊಳೆಯುವುದರಿಂದ ಕೂದಲುದುರುವಿಕೆ ನಿಲುತ್ತದೆ.ಯಾಕೆಂದರೆ ಇದರಲ್ಲಿಅಮೈನೊ ಆಸಿಡ್ ಅಂಶಗಳಿರುವುದರಿಂದ ಇದು ಕೂದಲಿನ ಬೇರನ್ನು ಗಟ್ಟಿಯಾಗಿಸುತ್ತದೆ. ಹಾಗೆ ಕೂದಲು ದಪ್ಪವಾಗಿ ಬೆಳೆಯುತ್ತದೆ. ಈ ನೀರು ಚರ್ಮಕ್ಕೆ ತುಂಬಾ ಒಳ್ಳೆಯದು. ಚರ್ಮವನ್ನು ತಂಪುಗೊಳಿಸುವ ಮತ್ತು ಮೃದುಗೊಳಸುವ ಸಾಮರ್ಥ್ಯ ಇದಕ್ಕಿದೆ.


ಇದರಲ್ಲಿ ಮೊಯ್ಚಿರೈಸರ್ ಆಂಟಿ ಆಕ್ಸಿಡೆಂಟ್ ಮತ್ತು ಗಾಯಗುಣಪಡಿಸುವ ಶಕ್ತಿ ಇರುವುದರಿಂದ ಇದನ್ನು ಸುಟ್ಟ ಗಾಯಗಳ ಆಯುರ್ವೆದಿಕ್  ಆಯಿಂಟ್ ಮೆಂಟ್ ಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಅಕ್ಕಿ ತೊಳೆದ ನೀರಿಗೆ ಕಿತ್ತಳೆ ಸಿಪ್ಪೆ, ಲಿಂಬೆಯ ಸಿಪ್ಪೆ, ಗ್ರೀನ್ ಟೀ, ತುಳಸಿದಳ, ಬೇವಿನ ಎಲೆ ಇವುಗಳಲ್ಲಿ ಯಾವುದಾದರೊಂದು ಮಿಕ್ಸ್ ಮಾಡಿ ಚರ್ಮಕ್ಕೆ ಬಳಸುವುದರಿಂದ ಚರ್ಮದಲ್ಲಿ ಉಂಟಾಗುವ ತುರಿಕೆ, ಅಲರ್ಜಿಗಳು ದೂರವಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ