ರುಚಿಕರವಾದ ಬೇಸಿನ ಲಾಡನ್ನು ತಯಾರಿಸುವ ಬಗೆ ಹೇಗೆ?

ಶುಕ್ರವಾರ, 15 ಮಾರ್ಚ್ 2019 (15:36 IST)
ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಬೇಸಿನ/ಕಡಲೆಹಿಟ್ಟು 1 ಕಪ್
* ತುಪ್ಪ 1/4 ಕಪ್
* ಸಕ್ಕರೆ ಪುಡಿ 1/2 ಕಪ್
* ಏಲಕ್ಕಿ ಪುಡಿ 1/4 ಚಮಚ
* ಗೋಡಂಬಿ
* ಒಣಕೊಬ್ಬರಿ 2 ಚಮಚ (ಬೇಕಿದ್ದರೆ)
 
  ತಯಾರಿಸುವ ವಿಧಾನ:

 ಮೊದಲು ಒಂದು ಬಾಣಲೆಯಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿ ಅದರಲ್ಲಿ ಗೋಡಂಬಿಯನ್ನು ಹುರಿದು ತೆಗೆದಿಟ್ಟುಕೊಳ್ಳಬೇಕು. ನಂತರ ಬಿಸಿಯಾದ ತುಪ್ಪಕ್ಕೆ ಕಡಲೆಹಿಟ್ಟನ್ನು ಹಾಕಿ ಸಣ್ಣ ಉರಿಯಲ್ಲಿ ಕೆಂಬಣ್ಣ ಬರುವವರೆಗೆ ಹುರಿಯಬೇಕು. ನಂತರ 10 ರಿಂದ 15 ನಿಮಿಷದ ನಂತರ ಒಲೆಯನ್ನು ಆರಿಸಿ ಅದು ಪೂರ್ತಿ ತಣ್ಣಗಾಗಿಸಬೇಕು. ನಂತರ ಈಗಾಗಲೇ ಪುಡಿ ಮಾಡಿದ ಸಕ್ಕರೆ, ಏಲಕ್ಕಿ ಪುಡಿ, ಹುರಿದ ಗೋಡಂಬಿ, ಒಣ ಕೊಬ್ಬರಿಯನ್ನು ಹಾಕಿ ಮಿಶ್ರಣ ಮಾಡಬೇಕು. ನಂತರ ನಿಮಗೆ ಬೇಕಾದ ಆಕಾರದಲ್ಲಿ ಉಂಡೆಗಳನ್ನು ಕಟ್ಟಿದರೆ ರುಚಿಕರವಾದ ಬೇಸಿನ್ ಲಾಡು ಸವಿಯಲು ಸಿದ್ಧ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ