ಬಾಂಬೆ ಕರಾಚಿ ಹಲ್ವಾ

ಬುಧವಾರ, 13 ಮಾರ್ಚ್ 2019 (15:26 IST)
ಹಲ್ವಾ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಹಬ್ಬ ಹರಿದಿನಗಳಲ್ಲಿ ಸಿಹಿ ತಿಂಡಿಗಳದ್ದೇ ಕಾರುಬಾರು. ಅದರಲ್ಲಿಯೂ ಮನೆಯಲ್ಲಿಯೇ ಸುಲಭವಾಗಿ ದಿಢೀರ್ ಆಗಿ ಮಾಡಬಹುದಾದ ಸಿಹಿತಿಂಡಿಗಳೆಂದರೆ ಹೆಂಗಳೆಯರಿಗೆ ಅಚ್ಚುಮೆಚ್ಚು. ಅಂತಹ ತಿಂಡಿಗಳ ಪಟ್ಟಿಗೆ ಈ ಬಾಂಬೆ ಕರಾಚಿ ಹಲ್ವಾವು ಸೇರಿಕೊಳ್ಳುತ್ತದೆ. ಈ ಹಲ್ವಾವನ್ನು ಸುಲಭವಾಗಿ ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ...
   ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಕಾರ್ನ್‌ಫ್ಲೋರ್ 1/2 ಕಪ್
* ನೀರು ಒಂದೂವರೆ ಕಪ್
* ಸಕ್ಕರೆ ಒಂದೂಕಾಲು ಕಪ್
* ತುಪ್ಪ 5 ರಿಂದ 6 ಚಮಚ
* ನಿಂಬೆರಸ 1 ಟೀ ಚಮಚ
* ಗೋಡಂಬಿ, ಪಿಸ್ತಾ, ಬಾದಾಮಿ
* ಏಲಕ್ಕಿ ಪೌಡರ್
 
    ತಯಾರಿಸುವ ವಿಧಾನ:
 
ಒಂದು ಬೌಲ್‌ನಲ್ಲಿ ಮೊದಲು ಕಾರ್ನ್‌ಫ್ಲೋರ್ ಮತ್ತು ನೀರನ್ನು ಹಾಕಿ ಗಂಟಿಲ್ಲದಂತೆ ಮಿಕ್ಸ್ ಮಾಡಿಟ್ಟುಕೊಳ್ಳಬೇಕು. ನಂತರ ಒಂದು ಪ್ಯಾನ್‌ನಲ್ಲಿ ಸಕ್ಕರೆ ಮತ್ತು ನೀರನ್ನು ಹಾಕಿ ಆ ಸಕ್ಕರೆಯು ಕರಗಿದ ನಂತರ ಸ್ವಲ್ಪ ಬಾಯಿಲ್ ಆದಾಗ ಅದಕ್ಕೆ ಈಗಾಗಲೇ ಮಿಕ್ಸ್ ಮಾಡಿಕೊಂಡ ಕಾರ್ನ್‌ಫ್ಲೋರ್ ಅನ್ನು ಹಾಕಿ ಮಿಶ್ರಣ ಮಾಡಬೇಕು. ಈ ಮಿಶ್ರಣವು ದಪ್ಪ ಆದಾಗ ಅದಕ್ಕೆ ನಿಂಬೆರಸವನ್ನು ಮಿಕ್ಸ್ ಮಾಡಬೇಕು. ನಂತರ ಒಂದೊಂದೇ ಚಮಚ ತುಪ್ಪವನ್ನು ಹಾಕಿ ಮಿಕ್ಸ್ ಮಾಡುತ್ತಾ ತುಪ್ಪವು ತಳಬಿಡುವ ತನಕ ತುಪ್ಪವನ್ನು ಹಾಕುತ್ತಾ ಇರಬೇಕು. ನಂತರ ಮಿಶ್ರಣವು ತಳ ಬಿಟ್ಟಾಗ ಒಂದು ತುಪ್ಪ ಸವರಿದ ತಟ್ಟೆಗೆ ಹಾಕಿ ಗೋಡಂಬಿ, ಪಿಸ್ತಾ, ಬಾದಾಮಿ ಹೀಗೆ ಬೇಕಾದ ಡ್ರೈ ಫ್ರುಟ್‌ಗಳಿಂದ ಅಲಂಕರಿಸಿ ಒಂದು ಗಂಟೆ ಬಿಟ್ಟು ಬೇಕಾದ ಆಕಾರಕ್ಕೆ ಕತ್ತರಿಸಿದರೆ ರುಚಿಯಾದ ಬಾಂಬೆ ಕರಾಚಿ ಹಲ್ವಾ ಸವಿಯಲು ಸಿದ್ಧ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ