ನಿಮ್ಮ ಹೈಟ್ ಕಡಿಮೆಯಾಗಲು ಕಾರಣವೇನು ಗೊತ್ತಾ?

ಮಂಗಳವಾರ, 5 ಜೂನ್ 2018 (15:41 IST)
ಬೆಂಗಳೂರು : ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ ದೇಹದ ಬೆಳವಣಿಗೆ ಕಡಿಮೆಯಾಗುತ್ತದೆ, ಕೆಲವೊಮ್ಮೆ ನಿಂತುಹೋಗುತ್ತದೆ. ಚಿಕ್ಕವಯಸ್ಸಿನಲ್ಲಿ ಬೆಳವಣಿಗೆ ಸರಿಯಾಗಿರರು ಹರೆಯಕ್ಕೆ ಬಂದಾಗ ಬೆಳವಣಿಗೆ ನಿಂತು ಹೋದರೆ ಇದಕ್ಕೆ ಕೆಲವರು ಹೇರಿಡಿಟಿ ಪ್ರಾಬ್ಲಮ್ ಎನ್ನುತ್ತಾರೆ. ಅವರ ಅಪ್ಪ ಅಮ್ಮನ ದೇಹದ ಬೆಳವಣಿಗೆ ಕಡಿಮೆ ಇದ್ದಾರೆ ನಿಮ್ಮ ದೇಹದ ಬೆಳವಣಿಗೆಯು ಅಷ್ಟೇ ಇರುತ್ತದೆ. ಹೀಗೆ ಕೆಲವು ಕಾರಣಗಳಿವೆ ನಮ್ಮ ದೇಹ ಎತ್ತರಕ್ಕೆ ಬೆಳೆಯದಿರಲು. ಅಂತಹ ಕಾರಣಗಳು ಇಲ್ಲಿವೆ ನೋಡಿ.


*ಜೆನೆಟಿಕ್‌ ಡಿಸಾರ್ಡರ್‌ ಅಂದರೆ ನಿಮ್ಮ ಕುಟುಂಬದಲ್ಲಿ ಯಾರದ್ದಾದರೂ ಹೈಟ್‌ ಕಡಿಮೆ ಇದ್ದರೆ ನಿಮ್ಮ ಹೈಟ್‌ ಕಡಿಮೆಯಾಗುತ್ತದೆ. ಇದು ನಿಮ್ಮ ಎತ್ತರ ಕಡಿಮೆ ಇರಲು ಮೊದಲ ಕಾರಣ

*ಬಾಲ್ಯದಲ್ಲಿ ಪೋಲಿಯೋ, ಅಸ್ತಮಾ, ರಿಕೆಟ್ಸ್‌, ಟಿಬಿ ಒದಲಾದ ಮಾಹಾ ಮಾರಿಗಳು ಕಾಣಿಸಿಕೊಂಡರೆ ಇದರ ಪರಿಣಾಮ ಹೈಟ್‌ ಮೇಲೆ ಉಂಟಾಗುತ್ತದೆ.

* ಕಡಿಮೆ ವಯಸ್ಸಿನಲ್ಲಿಯೇ ಧೂಮಪಾನ ಮತ್ತು ಮದ್ಯಪಾನ ಮಾಡುತ್ತಾ ಬಂದರೆ ಇದರ ಪರಿಣಾಮ ಹೈಟ್‌ ಮೇಲೆ ಕಾಣಿಸಿಕೊಳ್ಳುತ್ತದೆ. 

*ಹದಿ ಹರೆಯದವರು ಪ್ರತಿ ದಿನ ಸರಿಯಾಗಿ 8 ಗಂಟೆ ನಿದ್ರೆ ಮಾಡಬೇಕು. ಇದಕ್ಕಿಂತ ಕಡಿಮೆ ಸಮಯ ನಿದ್ರೆ ಮಾಡಿದರೆ ಶರೀರದಲ್ಲಿ ಹ್ಯೂಮನ್‌ ಗ್ರೋಥ್‌ ಹಾರ್ಮೋನ್‌ ಲೆವೆಲ್‌ ಕಡಿಮೆಯಾಗುತ್ತದೆ.

*ಪಿಟ್ಯೂಟರಿ ಗ್ರಂಥಿಗಳಿಂದ ಹೊರಬರುವ ಹ್ಯೂಮನ್‌ ಗ್ರೋಥ್‌ ಹಾರ್ಮೋನ್‌ ನಮ್ಮ ಮೂಳೆ ಮತ್ತು ಮಸಲ್ಸ್‌ಗಳ ಬೆಳವಣಿಗೆಗೆ ಸಹಾಯಕವಾಗಿದೆ. ದೇಹದಲ್ಲಿ ಇದರ ಸಮತೋಲನೆಯಲ್ಲಿ ವ್ಯತ್ಯಾಸವಾದರೆ ಹೈಟ್‌ ಹೆಚ್ಚಾಗುವುದಿಲ್ಲ.

*ಶರೀರದಲ್ಲಿ ಸತು, ಪ್ರೊಟೀನ್‌, ಕ್ಯಾಲ್ಸಿಯಂ, ಫಾಸ್ಪರಸ್‌, ವಿಟಾಮಿನ್‌ ಸಿ, ಬಿ2 ಮತ್ತು ಡಿ ಮುಂತಾದ ನ್ಯೂಟ್ರಿಯಂಟ್‌ ಕಡಿಮೆಯಾದರೆ ಉದ್ದವಾಗಲು ಸಾಧ್ಯವಿಲ್ಲ. ದೇಹಕ್ಕೆ ಬೇಕಾದ ಪ್ರೋಟಿನ್ಗಳು ಅಗತ್ಯವಾಗಿ ಬೇಕು.

*ಒಂದು ವೇಳೆ ಸಣ್ಣ ವಯಸ್ಸಿನಲ್ಲಿಯೇ ಆ್ಯಂಟಿಬಯೋಟಿಕ್‌ ಅಥವಾ ಬೇರೆ ಔಷಧಿಗಳನ್ನು ಸೇವನೆ ಮಾಡುತ್ತ ಬಂದರೆ ಇದರ ಅಡ್ಡ ಪರಿಣಾಮವಾಗಿ ಹೈಟ್‌ ಕಡಿಮೆಯಾಗುತ್ತದೆ. ಇದನ್ನ ಆದಷ್ಟು ತಡೆಗಟ್ಟಬೇಕು.

*ಫಿಸಿಕಲ್‌ ಆಕ್ಟಿವಿಟಿ ಸರಿಯಾದ ರೀತಿಯಲ್ಲಿ ಆಗದೆ ಇದ್ದರೆ ಮೂಳೆಗಳ ವಿಕಾಸ ಉಂಟಾಗುವುದಿಲ್ಲ. ಹೆಚ್ಚಾಗಿ ಪರಿಶ್ರಮ ಪಡದೇ ಇದ್ದರೆ ಹಸಿವು ಉಂಟಾಗುವುದಿಲ್ಲ. ಇದರಿಂದ ಶರೀರದಲ್ಲಿ ನ್ಯೂಟ್ರೀಶಿಯನ್‌ ಕಡಿಮೆಯಾಗುತ್ತದೆ. ಇದರಿಂದ ದೇಹದ ಬೆಳವಣಿಗೆ ಕುಂದುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ