ಮೈ ಕೈ ನೋವು ಬಂದಾಗಲೆಲ್ಲಾ ಚಳಿಗಾಲವನ್ನು ದೂರಬೇಡಿ!

ಗುರುವಾರ, 12 ಜನವರಿ 2017 (11:59 IST)
ಬೆಂಗಳೂರು: ಮೈ ಕೈ ನೋವು ಬಂದಾಗಲೆಲ್ಲಾ ಅಯ್ಯೋ ಬಿಡಿ.. ಎಲ್ಲಾ ಚಳಿಗಾಲದ ಇಫೆಕ್ಟ್ ಎಂದು ಉಡಾಫೆ ಮಾಡಬೇಡಿ. ಮೈ ಕೈ ನೋವಿಗೆ ಹವಾಮಾನವೇ ಕಾರಣವಲ್ಲ. ಹೀಗೆಂದು ಆಸ್ಟ್ರೇಲಿಯಾ ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

ಬೆನ್ನು ನೋವು, ಮೊಣಕಾಲು ನೋವಿಗೆ ಶೀತ ಹವಾಮಾನವೇ ಕಾರಣವಲ್ಲ. ಇದೆಲ್ಲಾ ನಮ್ಮದೇ ತಪ್ಪು ಕಲ್ಪನೆಗಳು. ಬಹುಶಃ ಕೋಲ್ಡ್ ಬ್ಲಡ್ ಇರುವ ಪ್ರಾಣಿಗಳಲ್ಲಿ ಇದು ಸಂಭವಿಸಬಹುದೇನೋ ಆದರೆ ಬಿಸಿ ರಕ್ತದ ಮನುಷ್ಯರಲ್ಲಿ ಹವಾಮಾನ ಬದಲಾವಣೆಯಿಂದ ಮೈ ಕೈ ನೋವು ಬರದು ಎಂದು ಸಂಶೋಧಕರು ವಾದಿಸುತ್ತಾರೆ.

ಆರಂಭದಲ್ಲಿ ಸಂಶೋಧಕರ ವಾದ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ಎರಡೆರಡು ಬಾರಿ ಅಧ್ಯಯನ ನಡೆಸಿ ಸಂಶೋಧಕರು ಈ ಸತ್ಯವನ್ನು ಕಂಡುಕೊಂಡಿದ್ದಾರೆ. ಸರಿಯಾಗಿ ಚಟುವಟಿಕೆ, ವ್ಯಾಯಾಮ ಮಾಡದೇ ಬರುವ ನೋವಿಗೆ ಹವಾಮಾನವನ್ನು ಧೂಷಿಸಬೇಡಿ ಎಂದು ಸಂಶೋಧಕರು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ