ನಿಮ್ಮ ಕಿವಿ ನಿಮ್ಮ ಆರೋಗ್ಯ ಹೇಗಿದೆ ಹೇಳುತ್ತದೆ? ಹೇಗೆ ಓದಿ ನೋಡಿ!
ಬುಧವಾರ, 29 ನವೆಂಬರ್ 2017 (08:28 IST)
ಬೆಂಗಳೂರು: ನಮ್ಮ ದೇಹದ ಆರೋಗ್ಯ ಹೇಗಿದೆ ಎಂದು ಹೇಳಲು ಕಿವಿಯೊಂದೇ ಸಾಕು. ಹೌದು. ಕಿವಿಯ ಆರೋಗ್ಯ ಹೇಗಿದೆ ಎಂಬುದು ನಮ್ಮ ಇಡೀ ದೇಹದ ಆರೋಗ್ಯ ಹೇಗಿದೆ ಎಂದು ಹೇಳಬಹುದು.
ಕಿವಿಯಲ್ಲಿ ಹೆಚ್ಚು ಕೀವು ತುಂಬಿದ್ದರೆ
ಅಮೆರಿಕಾದ ಆರೋಗ್ಯ ತಜ್ಞರ ಪ್ರಕಾರ ಕಿವಿಯಲ್ಲಿ ಹೆಚ್ಚು ಕೀವು ತುಂಬಿಕೊಂಡಿದ್ದರೆ ಅದು ಹೃದ್ರೋಗದ ಲಕ್ಷಣವಂತೆ!
ಕಿವಿ ಕೇಳಿಸುತ್ತಿಲ್ಲವೇ?
ಕಿವಿ ಮಂದವಾಗಿದ್ದರೆ ಮಧುಮೇಹದ ಲಕ್ಷಣ ಎನ್ನುತ್ತಾರೆ ತಜ್ಞರು. ಮಧುಮೇಹಿಗಳಲ್ಲಿ ಕಿವಿ ಮಂದವಾಗಿರುವುದು ಸಾಮಾನ್ಯ ಎಂದು ಸಮೀಕ್ಷೆಯೊಂದರಿಂದ ತಿಳಿದುಬಂದಿದೆಯಂತೆ.
ಕಿವಿ ನೋವು
ಕಿವಿಯಲ್ಲಿ ನೋವಾಗುತ್ತಿದ್ದರೆ ಅದು ದವಡೆಗೆ ಸಂಬಂಧಿಸಿದ ನೋವೂ ಆಗಿರಬಹುದು. ದವಡೆಯ ಎಲುಬಿನ ಸಮಸ್ಯೆಯಿಂದಲೂ ಕಿವಿ ನೋವು ಬರಬಹುದು.
ಕಿವಿ ಕಿರಿ ಕಿರಿ
ಕಿವಿಯೊಳಗೆ ಏನೋ ರಿಂಗಣಿಸುವ ಸದ್ದಾಗುತ್ತಿದ್ದರೆ ಅದು ರಕ್ತದೊತ್ತಡ ಅಥವಾ ಬ್ರೈನ್ ಟ್ಯೂಮರ್ ನ ಲಕ್ಷಣವಿರಬಹುದು ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ