ಬಿಕ್ಕಳಿಕೆ ನಿಲ್ಲಬೇಕೆಂದರೆ ಇದನ್ನು ಸೇವಿಸಿ

ಸೋಮವಾರ, 1 ಜುಲೈ 2019 (09:20 IST)
ಬೆಂಗಳೂರು : ಕೆಲವರಿಗೆ ತುಂಬಾ ಬಿಕ್ಕಳಿಕೆ ಕಾಣಿಸುತ್ತದೆ. ಇದರಿಂದ ಅವರಿಗೆ ಮಾತ್ರವಲ್ಲ, ಅವರ ಜೊತೆಯಲ್ಲಿರುವವರಿಗೂ ಕಿರಿಕಿರಿಯನ್ನುಂಟು ಮಾಡುತ್ತದೆ. ಇದರಿಂದ ಅವರು ಮುಜುಗರಕ್ಕೊಳಗಾಗಬಹುದು. ಅದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ. ಮನೆಯಲ್ಲಿಯೇ ಸಿಗುವ ಈ ವಸ್ತುಗಳಿಂದ  ಈ ಬಿಕ್ಕಳಿಕೆಗೆ ಗುಡ್ ಬೈ ಹೇಳಬಹುದು.




*ನಾಲ್ಕೈದು ಒಣ ದ್ರಾಕ್ಷಿಯನ್ನು ರಾತ್ರಿ ಒಂದು ಲೋಟ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿನ ಜೊತೆ ಸೇವಿಸಿದರೆ ಬಿಕ್ಕಳಿಕೆ ಕಡಿಮೆಯಾಗುತ್ತದೆ.


*ಶ್ರೀಗಂಧ ಅಥವಾ ಪಚ್ಚೆ ಕರ್ಪೂರವನ್ನು ಎದೆ ಹಾಲಿನಲ್ಲಿ ತೇದು ಮೂಗಿನ ಮೂಲಕ ಸೇವಿಸಿ.

*ಒಂದು ಚಮಚ ಸಕ್ಕರೆಯನ್ನು ಬಾಯಿಯಲ್ಲಿ ಹಾಕಿಕೊಂಡು ನಿಧಾನವಾಗಿ ಸೇವಿಸಿ.

*ಸತತವಾಗಿ ಬಿಕ್ಕಳಿಕೆ ಬರುತ್ತಿದ್ದರೆ 10 ರಿಂದ 20 ಗ್ರಾಂ ಕಬ್ಬಿನ ಹಾಲನ್ನು ಕುಡಿದರೆ ಬಿಕ್ಕಳಿಕೆ ನಿಲ್ಲುತ್ತದೆ.

*ಅಮೃತಬಳ್ಳಿಯ ಪುಡಿಯನ್ನು ಶುಂಠಿಪುಡಿ ಹಾಗೂ ಹಾಲಿನಲ್ಲಿ ಬೆರೆಸಿ ಸೇವಿಸಿದರೆ ಬಿಕ್ಕಳಿಕೆ ಕ್ರಮೇಣ ಕಡಿಮೆಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ