ಸುಕ್ಕುಗಟ್ಟಿದ ಚರ್ಮದಿಂದ ಮುಜುಗರವಾಗುತ್ತಿದೆಯಾ…?

ಗುರುವಾರ, 5 ನವೆಂಬರ್ 2020 (06:20 IST)
ಬೆಂಗಳೂರು : ವಯಸ್ಸಾಗುವುದು ಅನಿವಾರ್ಯ ಪ್ರಕ್ರಿಯೆ. ಇದನ್ನು ತಡೆಯಲು ಸಾಧ್ಯವಿಲ್ಲ. ಆದರೆ ಇದನ್ನು ಮುಂದಕ್ಕೆ ಹಾಕಲು ಮುಖಕ್ಕೆ ಈ ರೀತಿಯ ನೈಸರ್ಗಿಕ ಮನೆಮದ್ದನ್ನು ಹಚ್ಚಿ.

ವಿಟಮಿನ್ ಇ ಕೊರತೆಯಾದಾಗ ಮುಖದ ಚರ್ಮ ಸುಕ್ಕುಗಟ್ಟುತ್ತದೆ. ಆದಕಾರಣ ರಾತ್ರಿಯ ವೇಳೆ ವಿಟಮಿನ್ ಇ ಆಯಿಲ್ ನ್ನು ಹಚ್ಚಿ ಮಸಾಜ್ ಮಾಡಬೇಕು, ಇದರಿಂದ ಸ್ಕೀನ್ ಟೈಟ್ ಆಗುತ್ತದೆ.

ರೋಸ್ ವಾಟರ್ ಚರ್ಮವನ್ನು ಬಿಗಿಗೊಳಿಸುವ ಗುಣವನ್ನು ಹೊಂದಿದೆ. ಆದ್ದರಿಂದ ಮುಖಕ್ಕೆ ರೋಸ್ ವಾಟರ್ ಹಚ್ಚಿ 15-20 ನಿಮಿಷಗಳ ನಂತರ ಬೆಚ್ಚಗಿನ ನೀರಿನಲ್ಲಿ ವಾಶ್ ಮಾಡಿ.

ತೆಂಗಿನಹಾಲಿನಲ್ಲಿ ವಿಟಮಿನ್ ಸಿ ಅಧಿಕವಾಗಿದೆ. ಇದು ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತದೆ. ಮುಖಕ್ಕೆ ತೆಂಗಿನ ಹಾಲನ್ನು ಹಚ್ಚಿ ಒಣಗಿದ ಬಳಿಕ ವಾಶ್ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ