ಬೆಂಗಳೂರು: ಸಡನ್ನಾಗಿ ನಡೆಯುವಾಗ ಅಥವಾ ಮೆಟ್ಟಿಲು ಹತ್ತಿ ಇಳಿಯುವಾಗ ಕಾಲು ಉಳುಕಿ ನೋವಾದರೆ ಅದು ತೀರಾ ಸಮಸ್ಯೆ ತಂದೊಡ್ಡುತ್ತದೆ. ಹೀಗೆ ಉಳುಕಿ ನೋವಾದಾಗ ನಾವು ಏನೆಲ್ಲಾ ಮಾಡಬೇಕು?
ಐಸ್ ಮಸಾಜ್
ಉಳುಕಿದ ತಕ್ಷಣ ಮಣಿಗಂಟಿನ ಭಾಗಕ್ಕೆ ಐಸ್ ಕ್ಯೂಬ್ ಇಟ್ಟುಕೊಳ್ಳಿ. ಇದರಿಂದ ರಕ್ತ ಸಂಚಾರ ಸುಗಮವಾಗುತ್ತದೆ. ಉಳುಕಿದ ಭಾಗದಲ್ಲಿ ಕೆಲವೊಮ್ಮೆ ರಕ್ತ ಹೆಪ್ಪುಗಟ್ಟುವ ಸಂಭವವಿರುತ್ತದೆ. ಹಾಗೇನಾದರೂ ಇದ್ದರೆ ಐಸ್ ಕ್ಯೂಬ್ ಇಟ್ಟುಕೊಳ್ಳುವುದರಿಂದ ರಕ್ತ ಸಂಚಾರ ಸುಗಮವಾಗುತ್ತದೆ. ಅಷ್ಟೇ ಅಲ್ಲ, ಇದರಿಂದ ಊದಿಕೊಳ್ಳುವುದೂ ಇಲ್ಲ.
ಕ್ರೀಪ್ ಬ್ಯಾಂಡೇಜ್
ನಂತರ ಕ್ರೀಪ್ ಬ್ಯಾಂಡೇಜ್ ಹಾಕಿಕೊಂಡು ಕಾಲನ್ನು ನಿಧಾನವಾಗಿ ಮೇಲೆ ಕೆಳಗೆ ಮಾಡುತ್ತಾ ವ್ಯಾಯಾಮ ಮಾಡಿ. ಮಲಗುವಾಗ ಕಾಲಿನ ಭಾಗವನ್ನು ಎದೆಯ ಮಟ್ಟಕ್ಕಿಂತ ಕೊಂಚ ಮೇಲಕ್ಕೆತ್ತಿ ಮಲಗಿ. ಇದರಿಂದ ರಕ್ತ ಸ್ರಾವ ಸಹಜವಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ