ನಿಮ್ಮ ಚರ್ಮ ಯಾವ ಬಗೆಯದ್ದು ಎಂದು ಗುರುತಿಸಲು ಈ ಟಿಪ್ಸ್ ಫಾಲೋ ಮಾಡಿ

ಶನಿವಾರ, 7 ಸೆಪ್ಟಂಬರ್ 2019 (07:40 IST)
ಬೆಂಗಳೂರು: ಯಾವುದಾದರೂ ಚರ್ಮಕ್ಕೆ ಸಂಬಂಧ ಪಟ್ಟ ಉತ್ಪನ್ನಗಳನ್ನು ಬಳಸುವ ಮೊದಲು ನಾವು ನಮ್ಮ ಚರ್ಮ ಯಾವ ರೀತಿಯದ್ದು ಎಂಬುದನ್ನು ತಿಳಿದುಕೊಂಡಿರಬೇಕು. ಎಲ್ಲಾ ಉತ್ಪನ್ನಗಳು ಎಲ್ಲಾ ಚರ್ಮದವರಿಗೂ ಸರಿ ಹೊಂದುವುದಿಲ್ಲ. ನಮ್ಮ ಚರ್ಮಕ್ಕೆ ಸರಿ ಹೊಂದದೇ ಇರುವ ಉತ್ಪನ್ನ ಬಳಸಿದರೆ ಇದು ಚರ್ಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.

 

ಸಾಮಾನ್ಯವಾಗಿ ಜನರು 4 ಬಗೆಯ ಚರ್ಮವನ್ನು ಹೊಂದಿರುತ್ತಾರೆ. ಸಾಮಾನ್ಯ ತ್ವಚೆ, ಎಣ್ಣೆ ತ್ವಚೆ, ಒಣ ಹಾಗೂ ಸಂಮಿಶ್ರಣದ ತ್ವಚೆ. ಮೊದಲು ನಿಮ್ಮ ಮುಖವನ್ನು ಶುದ್ಧವಾದ ನೀರಿನಿಂದ ತೊಳೆಯಿರಿ. ಯಾವುದೇ ಉತ್ಪನ್ನವನ್ನು ಬಳಸಬೇಡಿ. ಮುಖವನ್ನು ಹಾಗೇಯೇ ಒಂದು ಗಂಟೆ ಬಿಟ್ಟು ಬಿಡಿ. ನಂತರ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಿ.

 

ನಿಮ್ಮ ಮುಖ ಆರೋಗ್ಯಕರವಾಗಿ ಹೊಳೆಯುತ್ತಿದ್ದರೆ ನಿಮ್ಮದು ನಾರ್ಮಲ್ ಸ್ಕಿನ್ ಆಗಿರುತ್ತದೆ. ಜಿಡ್ಡು, ಹಾಗೂ ಹೊಳೆಯುವಂತಿದ್ದರೆ ನಿಮ್ಮದು ಎಣ್ಣೆ ತ್ವಚೆ ಹಾಗೂ ಹಣೆ, ಮೂಗು, ಗದ್ದ ಬಳಖಿ ಜಿಡ್ಡು ಜಿಡ್ಡು ಆಗಿದ್ದರೆ ನಿಮ್ಮದು ಕಾಂಬಿನೇಷನ್ ಸ್ಕಿನ್  ಆಗಿರುತ್ತದೆ.

 

ಆದಷ್ಟು ವಿಟಮಿನ್ ಎ, ಡಿ, ಸಿ ಹಾಗೂ ಇ ಯನ್ನು ಜಾಸ್ತಿ ತಿನ್ನಿರಿ ಇದರಿಂದ ನಿಮ್ಮ ಸ್ಕಿನ್ ಆರೋಗ್ಯಕರವಾಗಿರುತ್ತದೆ.

 

 



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ