ಆಮಶಂಕೆ

ಶುಕ್ರವಾರ, 21 ನವೆಂಬರ್ 2014 (14:40 IST)
ಮಾವಿನ ಕಾಯಿಯನ್ನು ತಿನ್ನುವುದರಿಂದ ಕಾಲರಾ ಆಮಶಂಕೆ ರೋಗಗಳು ನಿರೋಧಿಸಲ್ಪಡುವವು.
ಕುರಿಯ ಹಾಲನ್ನು ದಿನವೂ ಸೇವಿಸುವುದರಿಂದ ದೇಹ ಶಕ್ತಿ ಅಧಿಕವಾಗುತ್ತದೆ.
 
ಮೊಡವೆಗಳ ನಿವಾರಣೆಗಾಗಿ ಮುಖದ ಕಾಂತಿ ಹೆಚ್ಚಿಸಲು ಸೇಬಿನ ತಿರುಳನ್ನು ಅರೆದು ಮುಖಕ್ಕೆ ಲೇಪಿಸಿಕೊಳ್ಳಬೇಕು.
 
ಚಳಿಗೆ ಮುಖದ ಚರ್ಮ ಒಡೆದರೆ ಹಾಲಿನ ಕೆನೆಯನ್ನು ಹಚ್ಚಿಕೊಂಡರೆ ಶೀಘ್ರವೇ ಗುಣವಾಗುತ್ತದೆ.
ನೆಲ್ಲಿಕಾಯಿಯನ್ನು ತೈಲದೊಡನೆ ಬೆರೆಸಿ ತಲೆಗೆ ಹಚ್ಚಿಕೊಳ್ಳುವುದರಿಂದ ಕೇಶದ ಬೆಳವಣಿಗೆ ಹೆಚ್ಚಾಗುತ್ತದೆ.
 
ಅಕ್ಕಿ ತೊಳೆದ ನೀರಿನಿಂದ ಬೆವರು ಗುಳ್ಳೆಗಳ ಭಾಗವನ್ನು ತೊಳೆಯುತ್ತಿದ್ದರೆ ಗುಳ್ಳೆಗಳು ಮಾಯವಾಗುವವು.
 
ಕಡಲೆ ಹಿಟ್ಟನ್ನು ಸೋಪಿಗೆ ಬದಲಾಗಿ ಬಳಸಿದರೆ ಚರ್ಮದ ಕಾಂತಿ ಹೆಚ್ಚುತ್ತದೆ ಮತ್ತು ಮೆದುವಾಗುತ್ತದೆ.
ನೀರಿಗೆ ಉಪ್ಪು ಬೆರೆಸಿ ಆ ನೀರಿನಿಂದ ತಲೆಯನ್ನು ತೊಳೆದುಕೊಂಡರೆ ತಲೆಯ ಹೊಟ್ಟಿನ ನಿವಾರಣೆಯಾಗುವುದು.

ವೆಬ್ದುನಿಯಾವನ್ನು ಓದಿ