ಮಗು ಮೂತ್ರಿಸಿದ ಹಾಸಿಗೆ ಕ್ಲೀನ್ ಮಾಡಲು ಸುಲಭ ಉಪಾಯ

ಶನಿವಾರ, 27 ಅಕ್ಟೋಬರ್ 2018 (09:00 IST)
ಬೆಂಗಳೂರು: ಮಕ್ಕಳು ಹಾಸಿಗೆಯಲ್ಲಿ ಮೂತ್ರಿಸಿದಾಗ ಅದು ಸಮಯ ಕಳೆದಂತೆ ಕೆಟ್ಟ ವಾಸನೆ ಬೀರುತ್ತದೆ. ಆದರೆ ಅದನ್ನು ಹೋಗಲಾಡಿಸುವುದು ಹೇಗೆ ಎಂದು ಚಿಂತಿಸುತ್ತಿದ್ದೀರಾ? ಅದಕ್ಕೊಂದು ಸರಳ ಉಪಾಯವಿದೆ.

ಅದಕ್ಕೆ ಬೇಕಾಗಿರುವುದು, ಹೈಡ್ರೋಜನ್ ಪೆರೋಕ್ಸೈಡ್, ಬೇಕಿಂಗ್ ಸೋಡಾ, ಡಿಶ್ ಸೋಪ್, ಲ್ಯಾವೆಂಡರ್‍ ಆಯಿಲ್ ಮತ್ತು ಒಂದು ಸ್ಪ್ರೇ ಬಾಟಲ್.

ಮೇಲೆ ಹೇಳಿದ ವಸ್ತುಗಳನ್ನು ಮಿಕ್ಸ್ ಮಾಡಿ ಸ್ಪ್ರೇ ಬಾಟಲ್ ನಲ್ಲಿ ಹಾಕಿ. ಬಳಿಕ ಮೂತ್ರದ ಕಲೆಯಿರುವ ಹಾಸಿಗೆ ಅಥವಾ ಸೋಫಾ ಮೇಲೆ ಸ್ಪ್ರೇ ಮಾಡಿ ಸ್ವಲ್ಪ ಸಮಯ ಬಿಡಿ. ನಂತರ ಸೋಫಾ ಅಥವಾ ಹಾಸಿಗೆಯನ್ನು ಬಿಸಿಲಿಗೆ ಒಣ ಹಾಕಿ. ಒಣಗಿದ ಮೇಲೆ ಒಳಗೆ ತಂದಿಡಿ. ಈಗ ನೋಡಿ, ಹಾಸಿಗೆಯಲ್ಲಿದ್ದ ವಾಸನೆಯೇ ಮಾಯವಾಗಿರುತ್ತದೆ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ