ಬೆಂಗಳೂರು: ಮುಟ್ಟಿನ ಸಮಯದಲ್ಲಿ ಯುವತಿಯರಿಗೆ ಹೊಟ್ಟೆ ನೋವಿನ ಸಮಸ್ಯೆ ಹೊಸದೇನಲ್ಲ. ಇಂದು ಇದು ಸಾಮಾನ್ಯವಾಗಿದೆ. ಆದರೆ ಈ ಸಮಯದಲ್ಲಿ ನೋವು ಕಡಿಮೆಯಾಗಬೇಕಾದರೆ ಏನು ಮಾಡಬೇಕು ಗೊತ್ತಾ?
ಬೆಲ್ಲ ಅಥವಾ ಬೆಲ್ಲದಲ್ಲಿ ಮಾಡಿದ ಸಿಹಿ ತಿನಿಸನ್ನು ಸೇವಿಸುತ್ತಿದ್ದರೆ ಉತ್ತಮ. ಅದೇ ರೀತಿ ಎಳ್ಳಿನ ಪದಾರ್ಥಗಳು, ಖಾದ್ಯಗಳನ್ನು ಆದಷ್ಟು ಸೇವಿಸಿ. ಜೀರಿಗೆ ಹುರಿದುಕೊಂಡು ಕಷಾಯ ಮಾಡಿ ಅದಕ್ಕೆ ಸ್ವಲ್ಪ ತುಪ್ಪ ಹಾಕಿಕೊಂಡು ಸೇವಿಸುತ್ತಿರಿ.
ಈ ಸಮಯದಲ್ಲಿ ಆದಷ್ಟು ಮಸಾಲೆಯುಕ್ತ ಆಹಾರ ಸೇವನೆ ಮಾಡುವುದು ಬೇಡ. ಆದಷ್ಟು ದೈಹಿಕ ಶ್ರಮ ಸಿಗುವ ಕೆಲಸ ಮಾಡದೇ ಇದ್ದರೆ ಉತ್ತಮ. ಹೆಚ್ಚು ಎಡಬದಿಗೆ ಹೊರಳಿ ಮಲಗುವುದರಿಂದ ಹೊಟ್ಟೆ ನೋವು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.