ಬೆಂಗಳೂರು: ರತಿಕ್ರೀಡೆ ಎಂಬುದು ಒಂದು ರೀತಿಯಲ್ಲಿ ದೈಹಿಕ ವ್ಯಾಯಾಮವಿದ್ದಂತೆ. ರತಿಕ್ರೀಡೆಯಾದ ಮೇಲೆ ಪುರುಷ ಮತ್ತು ಮಹಿಳೆಗೆ ಸುಸ್ತಾಗುವುದು ಸಹಜ. ಆದರೆ ವಿಪರೀತ ಬಳಲಿಕೆ ನಮ್ಮ ದೈನಂದಿನ ಚಟುವಟಿಕೆ ಮೇಲೆ ಪರಿಣಾಮ ಬೀರದಂತೆ ಮಾಡುವುದು ಹೇಗೆ?
ಅದಕ್ಕೆ ನಮ್ಮ ಆಹಾರದಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಇರುವ ಆಹಾರವನ್ನು ಹೆಚ್ಚು ಸೇವಿಸಬೇಕು. ಅಂದರೆ ಮೊಟ್ಟೆಯಲ್ಲಿ ಈ ಅಂಶ ಹೇರಳವಾಗಿದ್ದು, ಇದನ್ನು ನಮ್ಮ ಆಹಾರ ಕ್ರಮದಲ್ಲಿ ರೂಢಿಸಿಕೊಂಡರೆ ಮಿಲನದ ಬಳಿಕವೂ ಲವ ಲವಿಕೆಯಿಂದಿರಬಹುದು. ಹೆಚ್ಚು ಸುಸ್ತಾಗದಂತೆ ನೋಡಿಕೊಳ್ಳಬೇಕಾದರೆ ನಿದ್ರೆಯೂ ಪ್ರಮುಖವಾಗುತ್ತದೆ. ಮಿಲನದ ಬಳಿಕ ಸುದೀರ್ಘ ನಿದ್ರೆ ಮಾಡುವುದರಿಂದ ದೇಹಕ್ಕೆ ಚೈತನ್ಯ ಮರಳುತ್ತದೆ.