ಸಂಗಾತಿಯೊಡನೆ ಜಗಳವಾಡಿದ್ದೀರಾ? ಹಾಗಿದ್ದರೆ ರಾಜಿ ಮಾಡಿಕೊಳ್ಳಲು ಇಲ್ಲಿದೆ ಉಪಾಯ!
ಈ ಬಗ್ಗೆ ಪೆನಿಸುಲ್ವೇನಿಯಾದ ವಿವಿಯೊಂದು ಅಧ್ಯಯನ ನಡೆಸಿದ್ದು, ಜಗಳವಾದ ಮೇಲೆ ಒಂದಾಗಬೇಕೆಂದರೆ ಸಂಗಾತಿಯನ್ನು ಅಪ್ಪಿಕೊಳ್ಳಬೇಕು ಎಂದು ಪತ್ತೆ ಮಾಡಿದ್ದಾರೆ!
ಹೌದು ಒಂದು ಬಿಸಿ ಅಪ್ಪುಗೆಯಿಂದ ನಿಮ್ಮ ನಡುವಿನ ವೈಮನಸ್ಯಗಳು ದೂರವಾಗುತ್ತದೆ. ಸಂಬಂಧ ಮತ್ತಷ್ಟು ಹತ್ತಿರವಾಗುತ್ತದೆ ಎಂದು ಅಧ್ಯಯನಕಾರರು ಹೇಳಿದ್ದಾರೆ. ಸುಮಾರು 4000 ಕ್ಕೂ ಅಧಿಕ ಮಂದಿಯ ಮೇಲೆ ಸಮೀಕ್ಷೆ ನಡೆಸಿ ಅವರು ಈ ಸತ್ಯ ಕಂಡುಕೊಂಡಿದ್ದಾರಂತೆ! ಹಾಗಾಗಿ ಮಾಡಿ ನೋಡಿ!