ಹಲ್ಲುಗಳನ್ನು ಬಿಳಿಯಾಗಿಸುವುದು ಹೇಗೆ?

ಶುಕ್ರವಾರ, 28 ಜನವರಿ 2022 (09:02 IST)
ಹಳದಿಯಾದ ಹಲ್ಲುಗಳನ್ನು ಬಿಳಿಯಾಗಿಸಲು ಕೆಲವರು ವೈದ್ಯರ ಬಳಿ ಹೋಗುತ್ತಾರೆ. ಅದಕ್ಕಿಂತ ಮೊದಲು ಈ ಸರಳ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ.
 
ಹಲ್ಲುಗಳ ಆರೋಗ್ಯವಾಗಿರುವುದು ಅತೀ ಮುಖ್ಯವಾಗಿದೆ. ಕೆಲವೊಮ್ಮ ದೇಹದ ಆರೋಗ್ಯದಲ್ಲಿ ಏರುಪೇರಾದರೂ ಹಲ್ಲುಗಳ ಬಣ್ಣ ಬದಲಾಗುತ್ತವೆ. ಅದಕ್ಕೆ ಕೆಲವು ಕ್ರಮಗಳನ್ನು ಮನೆಯಲ್ಲೇ ಮಾಡಿಕೊಂಡರೆ ಬಿಳಿಯ ಹಲ್ಲುಗಳನ್ನು ಪಡೆಯಬಹುದು.

ಬಾಯಿಗೆ ಕೊಬ್ಬರಿ ಎಣ್ಣೆಯನ್ನು ಹಾಕಿ ಮುಕ್ಕಳಿಸುವುದರಿಂದ ಹಲ್ಲಿನಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಜತೆಗೆ ಹಲ್ಲಿಗೆ ಸಿಲುಕಿದ್ದ ಕೊಳೆಯೂ ಸ್ವಚ್ಛವಾಗಿ ಬಿಳಿಯ ಹಲ್ಲು ನಿಮ್ಮದಾಗುತ್ತದೆ.

ಬೇವು ಹಲ್ಲಿನ ಆರೋಗ್ಯಕ್ಕೆ ಅತ್ಯುತ್ತಮ ಮನೆಮದ್ದಾಗಿದೆ. ಬೇವಿನ ಕಡ್ಡಿಯಿಂದ ಹಲ್ಲುಗಳನ್ನು ಉಜ್ಜಿದರೆ ಹಲ್ಲಿನ ಬಣ್ಣವೂ ಬಿಳಿಯಾಗುತ್ತದೆ ಜತೆಗೆ ಕ್ಯಾವಿಟೀಸ್ಗಳಿಂದಲೂ ರಕ್ಷಣೆ ದೊರಕುತ್ತದೆ.

ದಿನಕ್ಕೆರಡು ಬಾರಿ ಹಲ್ಲುಗಳನ್ನು ಉಜ್ಜಿರಿ. ಇದರಿಂದ ಹಲ್ಲುಗಳಲ್ಲಿರುವ ಕೊಳೆ ಸ್ವಚ್ಛವಾಗಿ ಬಿಳಿಯ ಹಲ್ಲು ನಿಮ್ಮದಾಗುತ್ತದೆ. ನೆನಪಿಡಿ ಹಲ್ಲುಜ್ಜುವಾಗ ಬ್ರಷ್ನ ಆಯ್ಕೆ ಸರಿಯಾಗಿರಲಿ.

ಹಲ್ಲುಗಳನ್ನು ಸ್ವಚ್ಛಗೊಳಿಸವುದರ ಜತೆಗೆ ನಾಲಿಗೆಯನ್ನೂ ಕ್ಲೀನ್ ಮಾಡಿಕೊಳ್ಳಿ. ನಾಲಿಗೆಯನ್ನು ಆಗಾಗ ಹಲ್ಲಿಗೆ ತಾಗಿಸುವುದರಿಂದ ಕ್ಯಾವಿಟೀಸ್ ಉಂಟಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ನಾಲಿಗೆಯ ಸ್ವಚ್ಛತೆಯೂ ಅತಿ ಮುಖ್ಯವಾಗಿದೆ.

ಆದಷ್ಟು ಹರ್ಬಲ್ ಮೌತ್ ವಾಷ್ ಬಳಸಿ. ಜೇಷ್ಟಮದ್ದು ಅಥವಾ ತ್ರಿಫಲಾದ ಮೌತ್ ವಾಷ್ ಹಲ್ಲಿನ ಸ್ವಚ್ಛತೆಗೆ ಉತ್ತಮವಾಗಿದೆ. ಜತೆಗೆ ಬ್ಯಾಕ್ಟೀರಿಯಾಗಳನ್ನೂ ತೆಗೆದುಹಾಕುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ