ತಲೆನೋವು ನಿವಾರಿಸಲು ಮಾತ್ರೆಗಳನ್ನು ಸೇವಿಸುವ ಬದಲು ಇದನ್ನು ಸೇವಿಸಿ
ಗುರುವಾರ, 6 ಆಗಸ್ಟ್ 2020 (09:05 IST)
ಬೆಂಗಳೂರು : ಕೆಲವರಿಗೆ ನಿದ್ದೆ ಮಾಡದಿದ್ದಾಗ, ಶಬ್ದಗಳಿಂದ ತಲೆನೋವು ಕಾಣಿಸಿಕೊಳ್ಳುತ್ತದೆ. ಈ ತಲೆನೋವು ನಿವಾರಿಸಲು ಮಾತ್ರೆಗಳನ್ನು ಸೇವಿಸುವ ಬದಲು ಈ ಮನೆಮದ್ದನ್ನು ಬಳಸಿ.
ಹಸಿ ಶುಂಠಿಯನ್ನು ಸಿಪ್ಪೆ ತೆಗೆದು ಚಿಕ್ಕದಾಗಿ ಕಟ್ ಮಾಡಿಕೊಳ್ಳಿ. ಇದಕ್ಕೆ 1ಚಮಚ ನಿಂಬೆ ರಸ, 2 ಚಿಟಿಕೆ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 3 ಗಂಟೆಗಳ ಕಾಲ ಬಿಸಿಲಿನಲ್ಲಿ ಇಡಿ. ಬಳಿಕ ಅದನ್ನು ಫ್ರಿಜ್ ನಲ್ಲಿ ಸ್ಟೋರ್ ಮಾಡಿ ಇಡಬಹುದು. ತಲೆನೋವು ಬಂದಾಗ ಇದರಲ್ಲಿ 3 ಪೀಸ್ ತೆಗೆದು ತಿನ್ನಿ.