ಬಾಳೆ ಹಣ್ಣು ಕಪ್ಪಾಗದಂತೆ ತಡೆಯಲು ಈ ಉಪಾಯ ಮಾಡಿ
ಬುಧವಾರ, 25 ಅಕ್ಟೋಬರ್ 2017 (08:15 IST)
ಬೆಂಗಳೂರು: ಸಿಪ್ಪೆ ತೆಗೆದ ಬಾಳೆ ಹಣ್ಣು ಬಹುಬೇಗನೇ ಕಪ್ಪಗಾಗುತ್ತದೆ. ಅದು ಕಪ್ಪಗಾಗದಂತೆ ತಡೆಯಲು ಕೆಲವು ಉಪಾಯಗಳಿವೆ. ಅವು ಯಾವುವು ನೋಡೋಣ.
ಸೋಡಾ ನೀರು ಬಳಸಿ
ಸಿಪ್ಪೆ ತೆಗೆದ ಅಥವಾ ಕತ್ತರಿಸಿದ ಬಾಳೆ ಹಣ್ಣನ್ನು ಸೋಡಾ ನೀರಿನಲ್ಲಿ ಅದ್ದಿ ತೆಗೆದರೆ ಬೇಗನೇ ಅದು ಕಪ್ಪಗಾಗುವುದಿಲ್ಲ. ಅಷ್ಟೇ ಅಲ್ಲ, ಅದರ ರುಚಿಯೂ ಬದಲಾಗುವುದಿಲ್ಲ.
ವಿನೇಗರ್
ವಿನೇಗರ್ ಗೆ ಒಂದು ಲೋಟ ನೀರು ಸೇರಿಸಿ ಆ ನೀರಿಗೆ ಬಾಳೆ ಹಣ್ಣನ್ನು ಅದ್ದಿ ತೆಗೆದರೆ ಕಪ್ಪಗಾಗದಂತೆ ತಡೆಯಬಹುದು. ಸಿಪ್ಪೆ ತೆಗೆದ ಬಾಳೆ ಹಣ್ಣು ಫ್ರೆಶ್ ಆಗಿಯೇ ಇರುತ್ತದೆ.
ಗಾಳಿಯಾಡದಂತೆ ನೋಡಿಕೊಳ್ಳಿ
ಇನ್ನೊಂದು ಸುಲಭ ಉಪಾಯವೆಂದರೆ ಗಾಳಿಯಾಡದ ಬಾಕ್ಸ್ ನಲ್ಲಿ ಹಾಕಿಡುವುದು. ಇದರಿಂದ ಬಾಳೆ ಹಣ್ಣು ಕಪ್ಪಗಾಗದಂತೆ ತಡೆಯಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ