ಸೆಕ್ಸ್ ಬಳಿಕ ರಕ್ತಸ್ರಾವವಾಗುವುದು ಸಾಮಾನ್ಯವೇ?

ಭಾನುವಾರ, 23 ಸೆಪ್ಟಂಬರ್ 2018 (10:13 IST)
ಬೆಂಗಳೂರು: ಲೈಂಗಿಕ ಸಮಾಗಮದ ಬಳಿಕ ರಕ್ತ ಸ್ರಾವವಾದರೆ ಏನಾಯಿತೋ ಎಂಬ ಆತಂಕ ಕೆಲವರಿಗೆ ಕಾಡುತ್ತದೆ. ಆದರೆ ಈ ರೀತಿ ಆಗುವುದು ಸಾಮಾನ್ಯವೇ? ತಜ್ಞರು ಏನು ಹೇಳುತ್ತಾರೆ ನೋಡೋಣ.

ಒಣ ಯೋನಿ
ಡ್ರೈ ವೆಜೈನಾ ಅಥವಾ ಒಣ ಯೋನಿ ಸಮಸ್ಯೆಯಿದ್ದರೆ ಈ ರೀತಿ ಸಮಾಗಮದ ಬಳಿಕ ನೋವಿನ ಜತೆಗೆ ರಕ್ತಸ್ರಾವವಾಗಬಹುದು.

ಸಮಾಗಮದ ಸಂದರ್ಭ ಗಾಯ
ರಫ್ ಸೆಕ್ಸ್ ಸಂದರ್ಭದಲ್ಲಿ ಮೃದುವಾದ ಯೋನಿಯ ಒಳಭಾಗಕ್ಕೆ ಗಾಯವಾದರೆ ಸಣ್ಣ ಮಟ್ಟಿನ ರಕ್ತಸ್ರಾವವಾಗಬಹುದು.

ಸೋಂಕು
ಗುಪ್ತಾಂಗವನ್ನು ಶುಚಿಯಾಗಿಟ್ಟುಕೊಳ್ಳದೇ ಇರುವುದು, ಸಂಗಾತಿಯಿಂದ ಲೈಂಗಿಕ ಖಾಯಿಲೆ ಅಂಟಿಸಿಕೊಂಡಿದ್ದರೆ ಸೋಂಕಿನಿಂದಾಗಿ ರಕ್ತಸ್ರಾವವಾಗಬಹುದು.

ಗರ್ಭಕೋಶದ ಸಮಸ್ಯೆ
ಗರ್ಭಕೋಶ, ಅಥವಾ ಗರ್ಭಾಶಯದ ನಾಳದಲ್ಲಿ ಸಮಸ್ಯೆಯಿದ್ದಾಗ ರಕ್ತ ಸ್ರಾವವಾಗುವ ಸಾಧ್ಯತೆಯಿದೆ. ಇಂತಹ ಸಂದರ್ಭದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ