ಬೇಸಿಗೆಯಲ್ಲಿ ಕೂದಲಿನ ಹಾನಿಯನ್ನು ತಪ್ಪಿಸಲು ಈ ಎಣ್ಣೆಯಿಂದ ಮಸಾಜ್ ಮಾಡಿ
ಸೋಮವಾರ, 12 ಏಪ್ರಿಲ್ 2021 (07:11 IST)
ಬೆಂಗಳೂರು : ಬೇಸಿಗೆಯಲ್ಲಿ ಸೂರ್ಯ ಬೆಳಕು ಮತ್ತು ಮಾಲಿನ್ಯದಿಂದ ನಿಮ್ಮ ಕೂದಲಿಗೆ ಹಾನಿಯಾಗುತ್ತದೆ. ಹಾಗಾಗಿ ನೀವು ವಾರಕ್ಕೊಮ್ಮೆಯಾದರೂ ಕೂದಲಿಗೆ ಎಣ್ಣೆ ಮಸಾಜ್ ಮಾಡುತ್ತೀರಿ. ಒಂದು ವೇಳೆ ಎಣ್ಣೆ ಮಸಾಜ್ ಮಾಡಿದ ಬಳಿಕವೂ ಕೂದಲು ದುರ್ಬಲವಾಗುತ್ತಿದ್ದರೆ ಈ ಪರಿಹಾರಗಳನ್ನು ಮಾಡಿ.
ಕೂದಲಿಗೆ ವಾರಕ್ಕೊಮ್ಮೆಯಾದರೂ ಸಾಸಿವೆ ಎಣ್ಣೆಯನ್ನು ಬಳಸಿ. ಇದರಿಂದ ಕೂದಲು ನೈಸರ್ಗಿಕವಾಗಿ ಕಪ್ಪು ಮತ್ತು ದಪ್ಪವಾಗುತ್ತದೆ.
ಅಲ್ಲದೇ ½ ಚಮಚ ಮೆಹಂದಿ ಪುಡಿಗೆ 2 ಚಮಚ ಸಾಸಿವೆ ಎಣ್ಣೆ ಬೆರೆಸಿ ಕೂದಲಿಗೆ ಹಚ್ಚಿ. ಇದನ್ನು ರಾತ್ರಿಯಿಡಿ ಬಿಟ್ಟು ಬೆಳಿಗ್ಗೆ ಸ್ನಾನ ಮಾಡಿ, ಇದು ಕೂದಲನ್ನು ಕಂಡೀಷನರ್ ಮತ್ತು ದಪ್ಪ ಮಾಡುತ್ತದೆ.