ಮದುವೆಯ ಹಿಂದಿನ ದಿನ ಅಪ್ಪಿತಪ್ಪಿಯೂ ಈ ಸೌಂದರ್ಯ ಚಿಕಿತ್ಸೆಗಳನ್ನು ಬಳಸಬೇಡಿ

ಬುಧವಾರ, 2 ಸೆಪ್ಟಂಬರ್ 2020 (08:50 IST)
ಬೆಂಗಳೂರು : ಮದುವೆಯ ದಿನ ಚೆನ್ನಾಗಿ ಕಾಣಬೇಕು ಎಂದು ವಧು ಮುಖಕ್ಕೆ ಹಲವು ಬಗೆಯ ಫೇಶಿಯಲ್, ಕ್ರೀಂಗಳನ್ನು ಬಳಸುತ್ತಾರೆ. ಆದರೆ ಮದುವೆಯ ಹಿಂದಿನ ದಿನ ವಧು ಅಪ್ಪಿತಪ್ಪಿಯೂ ಈ ಸೌಂದರ್ಯ ಚಿಕಿತ್ಸೆಗಳನ್ನು ಬಳಸಬೇಡಿ.

*ಕೆಲವರು ಫೇಶಿಯಲ್ ಗಳನ್ನು ಮಾಡುತ್ತಾರೆ. ಆದರೆ ಇದರಿಂದ ಕೆಲವೊಮ್ಮೆ ಚರ್ಮದ ಕಿರಿಕಿರಿ, ಅಲರ್ಜಿ ಉಂಟಾಗುವ ಸಾಧ್ಯತೆ ಇದೆ.

*ಮದುವೆ ಇದೆ ಎಂದು ಕೆಲವರು ಮದುವೆ ಹಿಂದಿನ ದಿನ ಮುಖಕ್ಕೆ ಮನೆಮದ್ದುಗಳನ್ನು ಬಳಸುತ್ತಾರೆ. ಆದರೆ ಕೆಲವೊಂದು ನೈಸರ್ಗಿಕ ವಸ್ತುಗಳು ಕೂಡ ಚರ್ಮದ ಅಲರ್ಜಿ ಉಂಟುಮಾಡುವ ಸಾಧ್ಯತೆ ಇದೆ.

*ಕೆಲವರು ಮುಖಕ್ಕೆ ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಯುಕ್ತ ಪೀಲ್ ಅಪ್ ಗಳನ್ನು ಹಚ್ಚುತ್ತಾರೆ. ಿದರಿಂದ ಕೂಡ ಕೆಲವೊಮ್ಮೆ ಚರ್ಮಕ್ಕೆ ಅಪಾಯವಾಗುವ ಸಂಭವವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ