ಮದುವೆಗೆ ಮೊದಲು ಗೆಳತಿಗೆ ಹಾಸಿಗೆ ಸುಖಕ್ಕೆ ಒತ್ತಾಯಿಸುತ್ತಾಳೆ

ಗುರುವಾರ, 12 ಸೆಪ್ಟಂಬರ್ 2019 (08:51 IST)
ಬೆಂಗಳೂರು: ಮದುವೆಗೂ ಮೊದಲೇ ಲೈಂಗಿಕ ಸಂಬಂಧ ಒಳ್ಳೆಯದಲ್ಲ ಎಂದು ಹಲವರು ಹೇಳುತ್ತಾರೆ. ಹಾಗಿದ್ದರೂ ವಿವಾಹಕ್ಕೆ ಮೊದಲು ಒಮ್ಮೆ ದೈಹಿಕವಾಗಿ ಸೇರೋಣ ಎಂದು ಗೆಳತಿ ಒತ್ತಾಯಿಸುತ್ತಿದ್ದರೆ ಏನು ಮಾಡೋದು?


ಒಂದು ವೇಳೆ ವಿವಾಹವಾಗುತ್ತೇವೆ ಎಂದು ಖಾತ್ರಿಯಿದ್ದರೆ ಸೂಕ್ತ ಗರ್ಭನಿರೋಧಕಗಳೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದರೆ ತೊಂದರೆಯಾಗದು. ಆದರೆ ಕಾಲೇಜು ಜೀವನದಲ್ಲಿ ಗೆಳೆಯನ ಜತೆ ಲೈಂಗಿಕ ಸಂಪರ್ಕ ಮಾಡುವ ಮುನ್ನ ಭವಿಷ್ಯದ ಬಗ್ಗೆ ಯೋಚನೆ ಮಾಡುವುದು ಒಳ್ಳೆಯದು.

ಒಂದು ವೇಳೆ ಸಂಗಾತಿ ಒತ್ತಾಯಿಸುತ್ತಿದ್ದರೆ ಅವರಿಗೆ ನೀವೇ ತಿಳಿಸಿಹೇಳುವುದು ಒಳ್ಳೆಯದು. ಎಲ್ಲಕ್ಕಿಂತ ಮೊದಲು ಜೀವನದಲ್ಲಿ ನೆಲೆಯೂರುವುದು ಮುಖ್ಯ ಎನ್ನುವುದನ್ನು ಮನಗಾಣಿಸುವುದು ಉತ್ತಮ. ಒಂದು ವೇಳೆ ದೈಹಿಕ ಸಂಪರ್ಕಕ್ಕೆ ಒಪ್ಪಿಲ್ಲವೆಂದು ಮುನಿಸಿಕೊಂಡರೆ ಅಂತಹ ಸಂಬಂಧದಿಂದ ಹೊರಬರುವುದೇ ಉತ್ತಮ. ಯಾಕೆಂದರೆ ಎಲ್ಲಕ್ಕಿಂತ ಮುಖ್ಯವಾದುದು ಭವಿಷ್ಯ ಎನ್ನುವುದನ್ನು ಮರೆಯಬಾರದು. ದೈಹಿಕ ವಾಂಛೆಗಾಗಿ ಸುಂದರ ಭವಿಷ್ಯ ಹಾಳುಮಾಡಿಕೊಳ್ಳಬೇಡಿ. ಇಂತಹ ಸಂಬಂಧಕ್ಕೆ ಮುಂದೆ ಬೇಕಾದಷ್ಟು ಸಮಯವಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ