ಬೆಂಗಳೂರು :ಹಿಂದಿನ ಕಾಲದಿಂದಲೂ ನೆಲ್ಲಿಕಾಯಿಯನ್ನು ಔಷಧವಾಗಿ ಬಳಸುತ್ತಿದ್ದರು. ಆಯುರ್ವೇದದಲ್ಲಿ ಹಲವು ಕಾಯಿಲೆಗೆ ಇದರಿಂದ ಚಿಕಿತ್ಸೆ ನೀಡಲಾಗುತ್ತದೆ. ಅಲ್ಲದೇ ನೆಲ್ಲಿಕಾಯಿ ಬೀಜ ಕೂಡ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ.
*ಮೂಗಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ನೆಲ್ಲಿಕಾಯಿ ಬೀಜದ ಪುಡಿಯನ್ನು ತುಪ್ಪದಲ್ಲಿ ಹುರಿದು ಮೂಗು ಮತ್ತು ಹಣೆಯ ಮೇಲೆ ಹಚ್ಚಿ. ಇದು ಶೀಫ್ರದಲ್ಲಿಯೇ ಪರಿಹಾರ ನೀಡುತ್ತದೆ.
*ಚರ್ಮದ ಮೇಲೆ ದದ್ದುಗಳು, ಅಲರ್ಜಿಯಾಗಿದ್ದರೆ ಅದನ್ನು ನಿವಾರಿಸಲು ನೆಲ್ಲಿಕಾಯಿ ಬೀಜಗಳನ್ನು ತೆಂಗಿನೆಣ್ಣೆಯಲ್ಲಿ ಬೆರೆಸಿ ಕಜ್ಜಿ ಇರುವ ಕಡೆ ಹಚ್ಚಿ.
*ವಾಂತಿ, ವಾಕರಿಕೆ ಸಮಸ್ಯೆ ಇದ್ದರೆ ನೆಲ್ಲಿಕಾತಿ ಬೀಜಗಳ ಪುಡಿಯನ್ನು ಶ್ರೀಗಂಧ, ಜೇನುತುಪ್ಪದೊಂದಿಗೆ ಸೇವಿಸಿದರೆ ವಾಂತಿ, ವಾಕರಿಕೆ ನಿವಾರಣೆಯಾಗುತ್ತದೆ.