ಉಪ್ಪು, ಹುಳಿ, ಖಾರ ಸೇವಿಸಿದರೆ ಲೈಂಗಿಕ ಸಾಮರ್ಥ್ಯ ಹೆಚ್ಚುತ್ತಾ?!
ಸೋಮವಾರ, 1 ಏಪ್ರಿಲ್ 2019 (11:40 IST)
ಬೆಂಗಳೂರು: ಉಪ್ಪು, ಹುಳಿ, ಖಾರ ತಿನ್ನುವ ದೇಹವಲ್ಲವೇ? ಬಯಕೆಗಳು ಇದ್ದೇ ಇರುತ್ತದಲ್ಲವೇ? ಹೀಗಿರುವ ಕೆಲವು ಡೈಲಾಗ್ ಗಳನ್ನು ಸಿನಿಮಾದಲ್ಲಿ ಕೇಳಬಹುದು. ನಿಜವಾಗಿಯೂ ಉಪ್ಪು ಹುಳಿ ಖಾರ ಆಹಾರ ಸೇವಿಸುತ್ತಿದ್ದರೆ ಲೈಂಗಿಕ ಸಾಮರ್ಥ್ಯ ಹೆಚ್ಚುತ್ತದಾ?
ಕೆಲವರಿಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿಯಿದ್ದರೂ, ಸ್ಖಲನ, ಉದ್ರೇಕ ಇತ್ಯಾದಿ ಹಲವು ಸಮಸ್ಯೆಗಳು ಕಂಡುಬರುತ್ತವೆ. ಇದಕ್ಕೆ ಸೂಕ್ತ ತಜ್ಞ ವೈದ್ಯರಿಂದ ಪರೀಕ್ಷಿಸಿ ಸರಿಯಾದ ಚಿಕಿತ್ಸೆ ಪಡೆಯಬೇಕು.
ಅದರ ಹೊರತಾಗಿ ಉಪ್ಪು, ಹುಳಿ, ಖಾರಯುಕ್ತ ಪದಾರ್ಥ ನಮ್ಮ ಲೈಂಗಿಕ ಸಾಮರ್ಥ್ಯ ಹೆಚ್ಚಿಸುವುದಿಲ್ಲ. ಆರೋಗ್ಯಯುತ, ಪೋಷಕಾಂಷಭರಿತ ಆಹಾರದಿಂದ ನಮ್ಮ ದೇಹದ ಆರೋಗ್ಯ ಹೆಚ್ಚಿಸಬಹುದು. ಆದರೆ ಉಪ್ಪು, ಹುಳಿ, ಖಾರ ಸೇವನೆಯಿಂದ ಲೈಂಗಿಕ ಸಾಮರ್ಥ್ಯ ಹೆಚ್ಚಿಸಬಹುದು ಎನ್ನುವುದು ತಪ್ಪು ಕಲ್ಪನೆಯಷ್ಟೇ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ