ಬೆಂಗಳೂರು: ತಿಂಗಳಲ್ಲಿ ಒಂದು ಬಾರಿ ಅಂದರೆ ಆರೋಗ್ಯವಂತಹ ಮಹಿಳೆಯರ ಋತುಚಕ್ರದ ಅವಧಿ ಸಾಮಾನ್ಯವಾಗಿ 28 ದಿನಗಳಾಗಿರುತ್ತವೆ. ಆದರೆ ಕೆಲವರಿಗೆ ಒಮ್ಮೆಮ್ಮೆ ತಿಂಗಳಲ್ಲಿ ಎರಡು ಬಾರಿ ಮುಟ್ಟಾಗುವ ಸಮಸ್ಯೆಯಿರುತ್ತದೆ. ಇದಕ್ಕೆ ಕಾರಣವೇನು ಗೊತ್ತಾ?
ಗರ್ಭಿಣಿಯಾಗಿದ್ದರೆ
ಅವಧಿಗೆ ಪೂರ್ವ ಋತುಸ್ರಾವವಾಗುತ್ತಿದ್ದರೆ ಗರ್ಭಿಣಿಯಾಗಿರುವುದರ ಲಕ್ಷಣವೂ ಇರಬಹುದು. ಹೀಗಾಗಿ ಅಂತಹ ಅನುಮಾನಗಳಿದ್ದರೆ ತಕ್ಷಣವೇ ಪರೀಕ್ಷಿಸುವುದು ಉತ್ತಮ.
ಪಿಸಿಒಡಿ ಸಮಸ್ಯೆ
ಹಾರ್ಮೋನ್ ಸಮಸ್ಯೆ ಒಳಗೊಂಡಂತೆ ಪಿಸಿಒಡಿ ಸಮಸ್ಯೆಯಿದ್ದಾಗ ಅನಿಯಮಿತ ಮುಟ್ಟುಬರುವುದು ಸಹಜ. ಕೆಲವೊಮ್ಮೆ ಇಂತಹ ಪರಿಸ್ಥಿತಿಯಲ್ಲಿ ಮುಟ್ಟು ಬರದೇ ಇರುವ ಪರಿಸ್ಥಿತಿಯೂ ಇರಬಹುದು.
ಥೈರಾಯ್ಡ್ ಸಮಸ್ಯೆ
ಮಹಿಳೆಯರಲ್ಲಿ ಥೈರಾಯ್ಡ್ ಸಮಸ್ಯೆಯಿದ್ದಾಗ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳು ಎದುರಾಗುವುದು ಸಹಜ. ಅದರಲ್ಲಿ ಅನಿಯಮಿತ ಋತುಚಕ್ರದ ಅವಧಿಯೂ ಒಂದು.
ಗರ್ಭನಿರೋಧಕ ಮಾತ್ರೆ ಪ್ರಭಾವ
ಗರ್ಭನಿರೋಧಕ ಗುಳಿಗೆಗಳು ಹಾರ್ಮೋನ್ ನಿಯಂತ್ರಿಸುವ ಕೆಲಸ ಮಾಡುತ್ತವೆ. ಹೀಗಾಗಿ ಇದು ಋತುಚಕ್ರದ ಮೇಲೆ ಪ್ರಭಾವ ಬೀರುವ ಸಾಧ‍್ಯತೆಗಳಿರುತ್ತವೆ.