ಬೆತ್ತಲೆಯಾಗಿ ಮಲಗೋದೂ ಒಳ್ಳೆಯದೇ!

ಶನಿವಾರ, 2 ಸೆಪ್ಟಂಬರ್ 2017 (08:18 IST)
ಬೆಂಗಳೂರು: ಬಿಗಿಯಾದ ಬಟ್ಟೆ ಹಾಕಿಕೊಂಡು ಮಲಗುವ ಅಭ್ಯಾಸವೇ? ಹಾಗಿದ್ದರೆ ಇನ್ನು ಎಲ್ಲಾ ಬಿಚ್ಚಿಟ್ಟು ಮಲಗಿ. ಆರೋಗ್ಯಕ್ಕೂ ಒಳ್ಳೆಯದು.

 
ನಿದ್ರಿಸುವಾಗ
ನಮ್ಮ ಮೆದುಳಿಗೆ ನಿದ್ರಿಸುವಾಗ ಹದವಾದ ದೇಹ ತಾಪಮಾನದ ಅಗತ್ಯವಿದೆ. ಹಾಗಾಗಿ ವಿಪರೀತ ಹೊದ್ದುಕೊಂಡು ಮಲಗುವುದು ಒಳ್ಳೆಯದಲ್ಲ. ಹಾಗಾಗಿ ಬಟ್ಟೆ ಎಲ್ಲಾ ಕಳಚಿ ಮಲಗುವುದರಿಂದ ದೇಹದ ಉಷ್ಣತೆ ಹದವಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.

ನಿದ್ರಿಸುವಾಗ ತೂಕ ಕಳೆದುಕೊಳ್ಳಬಹುದು!
ಸುಖವಾದ ನಿದ್ರೆ ಬರಬೇಕಾದರೆ ಒತ್ತಡ ರಹಿತ ಶಯನ ನಿಮ್ಮದಾಗಬೇಕು. ಶಾಂತವಾಗಿ ನಿದ್ರಿಸುವಾಗ ನಮ್ಮ ಬೆಳವಣಿಗೆಯ ಹಾರ್ಮೋನ್ ಬೆಳೆಯುತ್ತದೆ, ಒತ್ತಡ ಉಂಟುಮಾಡುವ ಹಾರ್ಮೋನ್ ಬೆಳವಣಿಗೆ ಕಡಿಮೆಯಾಗುತ್ತದೆ.

ಲವ್ ಲೈಫ್ ಗೂ ಒಳ್ಳೆಯದು!
ಸಂಗಾತಿ ಜತೆಗೆ ಹೆಚ್ಚು ಹೆಚ್ಚು ದೇಹ ಬಿಸಿ ತಗುಲಿಸಿಕೊಂಡಿದ್ದರೆ ಪ್ರೀತಿ ಹೆಚ್ಚಾಗುವುದು! ದೈಹಿಕವಾಗಿ ಸಂಗಾತಿಗೆ ಅಂಟಿಕೊಂಡಂತೆ ಇರುವುದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಹತ್ತಿರವಾಗಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ