ಸಕ್ಕರೆಯಾ? ಉಪ್ಪೋ? ಯಾವುದು ಮೇಲು?

ಸೋಮವಾರ, 21 ಆಗಸ್ಟ್ 2017 (08:44 IST)
ಬೆಂಗಳೂರು: ಸಕ್ಕರೆ ಮತ್ತು ಉಪ್ಪು ಇಲ್ಲದೇ ನಮ್ಮ ಅಡುಗೆ ನಡೆಯುವುದೇ ಇಲ್ಲ. ಆದರೆ ಯಾವುದನ್ನೂ ಹೆಚ್ಚಿಸುವುದು ಒಳ್ಳೆಯದಲ್ಲ. ಸಕ್ಕರೆ ಮತ್ತು ಉಪ್ಪು ನಮ್ಮ ದೇಹಕ್ಕೆ ಎಷ್ಟು ಮುಖ್ಯ, ಎಷ್ಟು ಹಾನಿಕರ ನೋಡೋಣ.


 
ಸಕ್ಕರೆ
ಸಕ್ಕರೆ ಹಾಕಿ ಕಾಫಿ, ಹಾಲು ಅಥವಾ ಸ್ವೀಟ್ ತಿನ್ನುವುದು ಎಲ್ಲರಿಗೂ ಇಷ್ಟ. ಆದರೆ ಸಕ್ಕರೆ ಇಷ್ಟವೆಂದು ಹೆಚ್ಚು ಸೇವನೆ ಮಾಡುತ್ತಿದ್ದರೆ ನಿಮ್ಮ ದೇಹದಲ್ಲಿ ಪೋಷಕಾಂಶಗಳ ಕೊರತೆ ಕಾಡಬಹುದು ಮತ್ತು ಬೊಜ್ಜು ಬೆಳೆಯಬಹುದು. ಹಾಗಾಗಿ ಮಧುಮೇಹವೊಂದೇ ಅಲ್ಲ, ಸಕ್ಕರೆ ತಿನ್ನುವುದರಿಂದ ಬೇರೆ ಅಪಾಯಗಳೂ ಇವೆ ಎನ್ನುವುದನ್ನು ಮರೆಯುವಂತಿಲ್ಲ.

ಉಪ್ಪು
ಆರೋಗ್ಯಕರ ಮನಷ್ಯನಿಗೆ ದೇಹದಲ್ಲಿ ಒಂದು ದಿನಕ್ಕೆ ಸ್ವಲ್ಪ ಅಂಶವಾದರೂ ಬೇಕೇ ಬೇಕು. ಉಪ್ಪು ತಿನ್ನದೇ ಇರುವುದೂ ಒಳ್ಳೆಯದಲ್ಲ. ಹಾಗಂತ ಹೆಚ್ಚು ಪ್ರಮಾಣದಲ್ಲಿ ಉಪ್ಪು ಸೇವಿಸುವುದರಿಂದ ರಕ್ತದೊತ್ತಡ ಏರುವುದಷ್ಟೇ ಅಲ್ಲ, ಕಿಡ್ನಿ ವೈಫಲ್ಯ,  ಹೃದಯ ಖಾಯಿಲೆ ಮುಂತಾದ ಸಮಸ್ಯೆಯೂ ಬರಬಹುದು. ಹಾಗಾಗಿ ಉಪ್ಪು ತಿನ್ನುವ ಮೊದಲು ಎಚ್ಚರವಾಗಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ