ಪಿಜ್ಜಾ,ಬರ್ಗರ್‌ಗಿಂತಲೂ ಕರಿದ ತಿಂಡಿಗಳು ಹೆಚ್ಚು ಅಪಾಯಕಾರಿ

ಗುರುವಾರ, 18 ಆಗಸ್ಟ್ 2016 (10:39 IST)
ಇಂದಿನ ಮಕ್ಕಳು,ಯುವಕರು, ದೊಡ್ಡವರು ಹೆಚ್ಚು ಜಂಕ್ ಹಾಗೂ ಕರಿದ ತಿಂಡಿಗಳ ಕಡೆಗೆ ಹೆಚ್ಚು ಗಮನ ಕೊಡುತ್ತಾರೆ. ಇಂದಿನ ಮಕ್ಕಳು ಹೆಚ್ಚು ಪಿಜ್ಜಾ, ಬರ್ಗರ್ ಅಂಥ ತಿಂಡಿಗಳನ್ನು ಜಾಸ್ತಿ ಸೇವಿಸುತ್ತಾರೆ, ಆದ್ರೆ ಹೆಚ್ಚು ಅಪಾಯಕಾರಿ ವಿಷಯ ಅಂದ್ರೆ ಪಿಜ್ಜಾ, ಬರ್ಗರ್ ಗಳಿಗಿಂತಲೂ ಕರಿದ ತಿಂಡಿಗಳು ಅಪಾಯಕಾರಿ ಎಂದು ಹೇಳಬಹುದು. 
ಸಮೋಸಾ
ಸಮೋಸಾ ಅಂದ್ರೆ ಸಾಕು ಬಾಯಲ್ಲಿ ನೀರಿರುಸುವ ತಿಂಡಿ.. ಪಾರ್ಟಿ ವೇಳೆ ಹಲವು ಜನರು ಸಮೋಸಾವೊಂದನ್ನು ಇಷ್ಟಪಡುತ್ತಾರೆ. ಸಮೋಸಾ ನೋಡಿದಮೇಲೆ ತಿನ್ನಬೇಕು ಅಂತ ಅನ್ನಿಸಿದ್ರು, ಅದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಲ್ಲದ್ದು, ಸಮೋಸಾ ಕೊಬ್ಬನ್ನು ಹೆಚ್ಚಿಸಬಲ್ಲದ್ದು, 
 
ಕಚೋರಿ:
ರುಚಿ ರುಚಿಕರವಾದ ಕಚೋರಿ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಇದು ತಕ್ಷಣ ನಿಮ್ಮ ಆಸಿಡಿಟಿಗೆ ಕಾರಣವಾಗಬಲ್ಲದ್ದು, ಅಲ್ಲದೇ ಹೃದಯ ಕಾಯಿಲೆಗಳು, ಬೊಜ್ಜು ಹಾಗೂ ಕೊಲೆಸ್ಟ್ರಾಲ್ ಕಾಯಿಲೆಗಳಿಗೆ ಕಾರಣವಾಗಬಲ್ಲದಾಗಿದೆ.
 
ಬುಜಿಯ
ಬಿಜಿಯ ಸಾಮಾನ್ಯವಾಗಿ ಎಲ್ಲಾ ಜನರು ಇಷ್ಟ ಪಡುತ್ತಾರೆ. ಎಲ್ಲಾ ಸಮಯದಲ್ಲೂ ಜನರು ಬುಜಿಯ ಎಂಬ ತಿನಿಸನ್ನು ಇಷ್ಟಪಡುತ್ತಾರೆ. ಎಲ್ಲರೂ ಇದನ್ನು ತಿನ್ನಲು ಇಷ್ಟಪಡುತ್ತಾರೆ ಆದ್ರೂ 
ಬುಜಿಯ ಹೆಚ್ಚಿನ ಕೊಲೆಸ್ಟ್ರಾಲ್ ಹೆಚ್ಚಿಸುವ ಎಲ್ಲಾ ರಾಸಾಯನಿಕಗಳನ್ನು ಒಳಗೊಂಡಿರುತ್ತದೆ.  ಬುಜಿಯ ಸೇವಿಸುವುದರಿಂದ ಹೆಚ್ಚಿನ ಸಕ್ಕರೆ ಮಟ್ಟ ಹಾಗೂ ರಕ್ತದೋತ್ತಡ ಕಾರಣವಾಗಬಹುದು, 
 
ಪಾನಿ ಪೂರಿ 
ಪಾನಿ ಪುರಿ ಹಾಗೂ ಗೋಲ್‌ಗುಪ್ಪಾ ಎಲ್ಲರೂ ಇಷ್ಟಪಡುವ ತಿನಿಸು. ಇದು ನಿಮ್ಮ ಬಾಯಿ ಹುಣ್ಣಿಗೆ ಕಾರಣವಾಗಬಲ್ಲದು, ಅಲ್ಲದೇ ಇದರಲ್ಲಿ ಹೆಚ್ಚು ಕ್ಯಾಲೋರಿ ಇರುವುದರಿಂದ ತೂಕ ಹೆಚ್ಚಾಗುತ್ತದೆ. ಪಾನಿ ಪುರಿ ತಿನ್ನುವುದರಿಂದ ಹೊಟ್ಟೆ ಬೊಜ್ಜಿಗೆ ಪರಿಣಾಮ ಬೀರುತ್ತದೆ. 
 
ವಡಾ
ವಡಾವನ್ನು ಹೆಚ್ಚಾಗಿ ಎಣ್ಣೆಯಲ್ಲಿ ಕರಿಯುವುದರಿಂದ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಇರಲ್ಲಿರುವ ಸಾಮಾಗ್ರಿಗಳು ಆರೋಗ್ಯಕ್ಕೆ ಉತ್ತಮವಾದ್ರೂ, ಇದು ನಿಮ್ಮ ತೂಕ ಹೆಚ್ಚಿಸಬಲ್ಲದ್ದಾಗಿದೆ. 
 
ಗುಲಾಬ್ ಜಾಮೂನು
ಹಬ್ಬದ ಸಂದರ್ಭಗಳಲ್ಲಿ ಮಾಡಲಾಗುವ ಗುಲಾಮ್ ಜಾಮೂನು ಎಲ್ಲರೂ ಮಾಡುವಂತಹ ತಿನಿಸು. ಹಲವರು ಗುಲಾಬ್ ಜಾಮೂನು ಇಷ್ಟಪಡುತ್ತಾರೆ. ಆದ್ರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ಪಿಜ್ಜಾ,ಬರ್ಗರ್ ಗಳಿಗಿಂತಲೂ ಹೆಚ್ಚು ಅಪಾಯಕಾರಿಗಳಾಗಿವೆ ಕರಿದ ತಿಂಡಿಗಳು. ಆದ್ದರಿಂದ ಕರಿದ ತಿಂಡಿಗಳನ್ನು ಹೆಚ್ಚಾಗಿ ಸೇವಿಸದೇ ಇರುವುದು ಉತ್ತಮ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ