ಅಡುಗೆ ಮಾಡುವಾಗ ಮಾಡುವ ಈ ತಪ್ಪುಗಳು ಆರೋಗ್ಯಕ್ಕೆ ಕುತ್ತು ತರಬಹುದು!

ಮಂಗಳವಾರ, 28 ಆಗಸ್ಟ್ 2018 (08:30 IST)
ಬೆಂಗಳೂರು: ಅಡುಗೆ ಮನೆ ಎನ್ನುವುದು ನಮ್ಮ ಆರೋಗ್ಯದ ಹೆದ್ದಾರಿ ಇದ್ದಂತೆ. ಎಷ್ಟು ಆರೋಗ್ಯಕರವಾಗಿ ಅಡುಗೆ ಮಾಡುತ್ತೇವೋ, ಅಷ್ಟೇ ಚೆನ್ನಾಗಿ ನಮ್ಮ ಆರೋಗ್ಯವೂ ಇರುತ್ತದೆ. ಆದರೆ ಅಡುಗೆ ಮನೆಯಲ್ಲಿ ನಾವು ಮಾಡುವ ಕೆಲವು ತಪ್ಪುಗಳು ನಮ್ಮ ಆರೋಗ್ಯಕ್ಕೇ ಕುತ್ತು ತರಬಹುದು.

ವಿಪರೀತ ಅಲಂಕಾರ
ಯಾವುದಾದರೂ ಒಂದು ವಿಶೇಷ ತಿಂಡಿ ಮಾಡಿ ಅದನ್ನು ಆಕರ್ಷಕವಾಗಿ ಕಾಣುವಂತೆ ಮಾಡಲು ವಿಪರೀತ ಅಲಂಕರಿಸಿದರೆ ಆಹಾರ ಹಾಳಾಗುವುದು ಖಂಡಿತಾ. ಅಗತ್ಯಕ್ಕಿಂತ ಹೆಚ್ಚು ಹುರಿದುಕೊಳ‍್ಳುವುದು, ಎಣ್ಣೆ ಬಳಸಿ ಒಗ್ಗರಣೆ ಹಾಕುವುದು ಒಳ್ಳೆಯದಲ್ಲ.

ಬಿಸಿ ಪದಾರ್ಥಕ್ಕೆ ಜೇನು ತುಪ್ಪ ಹಾಕಬೇಡಿ
ಜೇನು ತುಪ್ಪ ಬಳಕೆ ಆರೋಗ್ಯಕ್ಕೆ ಒಳ್ಳೆಯದು ನಿಜ. ಆದರೆ ಬಿಸಿಯಾದ ಪದಾರ್ಥಕ್ಕೆ ಜೇನು ತುಪ್ಪ ಸೇರಿಸುವುದರಿಂದ ಆಹಾರ ವಿಷಯುಕ್ತವಾಗಬಹುದು. ನೆನಪಿರಲಿ, 40 ಡಿಗ್ರಿ ತಾಪಮಾನಕ್ಕಿಂತ ಅಧಿಕ ಬಿಸಿ ಇರುವ ಆಹಾರ ವಸ್ತುವಿಗೆ ಜೇನು ತುಪ್ಪ ಹಾಕಬೇಡಿ.

ಅತಿಯಾಗಿ ಎಣ್ಣೆ ಬಿಸಿ ಮಾಡುವುದು
ಕೊಬ್ಬರಿ ಎಣ್ಣೆ, ಒಲಿವ್ ಎಣ್ಣೆಯಂತಹ ಆರೋಗ್ಯಕರ ಎಣ್ಣೆಯನ್ನು ಅಗತ್ಯಕ್ಕಿಂತ ಹೆಚ್ಚು ಬಿಸಿ ಮಾಡಿಕೊಳ್ಳುವುದರಿಂದ ಅದರಲ್ಲಿರುವ ಪೋಷಕಾಂಶಗಳು ನಷ್ಟವಾಗುವುದು.

ಕರಿದು ಮಾಡುವ ತಿಂಡಿ
ಮಕ್ಕಳು ತಿನ್ನಲ್ಲ ಎಂದು ಹಸಿ ತರಕಾರಿ ನೀಡುವ ಬದಲು ಅದನ್ನೂ ಫ್ರೈ ಮಾಡಿ ಕೊಡುವುದು ಒಳ್ಳೆಯದಲ್ಲ. ಇದರಿಂದ ಮಧುಮೇಹ, ಹೃದಯ ಸಮಸ್ಯೆ ಬರಬಹುದು. ಆದಷ್ಟು ಎಣ್ಣೆಯಲ್ಲಿ ಕರಿದು ಸೇವಿಸುವುದನ್ನು ಕಡಿಮೆ ಮಾಡಿದರೆ ಒಳ್ಳೆಯದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ