ಬೆಳಗ್ಗೆ ಬೆಳಿಗ್ಗೆಯೇ ರೊಮ್ಯಾನ್ಸ್ ಮಾಡೋದು ಮಹಿಳೆಯರಿಗೆ ಇಷ್ಟವಾಗಲ್ಲ ಯಾಕೆ ಗೊತ್ತಾ?!
ಸೋಮವಾರ, 27 ಆಗಸ್ಟ್ 2018 (09:00 IST)
ಬೆಂಗಳೂರು: ಏನ್ರೀ.. ಇದು ಬೆಳ್ಳಂ ಬೆಳಿಗ್ಗೇನಾ..? ಅಂತ ನಿಮ್ಮ ಪತ್ನಿಯೇನಾದರೂ ಹುಸಿಕೋಪ ಪ್ರದರ್ಶಿಸಿದರೆ ಬೇಸರಗೊಳ್ಳಬೇಡಿ. ಸಾಮಾನ್ಯವಾಗಿ ಮಹಿಳೆಯರು ಬೆಳಿಗ್ಗೆಯೇ ರೊಮ್ಯಾನ್ಸ್ ಮಾಡುವುದನ್ನು ಇಷ್ಟಪಡುವುದಿಲ್ಲವಂತೆ.
ಹಾಗಂತ ಆನ್ ಲೈನ್ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಮಹಿಳೆಯರು ಲೈಂಗಿಕ ಕ್ರಿಯೆ ಮಾಡಲು ಬೆಳಿಗ್ಗೆಗಿಂತ ರಾತ್ರಿಯೇ ಇಷ್ಟಪಡುತ್ತಾರಂತೆ. ಹಾಗಂತ ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ. 60 ಕ್ಕೂ ಹೆಚ್ಚು ಮಹಿಳೆಯರು ಅಭಿಪ್ರಾಯಪಟ್ಟಿದ್ದಾರಂತೆ.
ಬೆಳಗ್ಗಿನ ಹೊತ್ತು, ಎನರ್ಜಿ ಇರಲ್ಲ, ಮೂಡ್ ಇರಲ್ಲ, ,ಸಮಯವೂ ಇರಲ್ಲ ಎನ್ನುವುದು ಸಮೀಕ್ಷೆಯಲ್ಲಿ ಪಾಲ್ಗೊಂಡ ಮಹಿಳೆಯರು ನೀಡಿದ ಕಾರಣಗಳು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.