ಬೆಂಗಳೂರು : ದೇಹಕ್ಕೆ ವಿಟಮಿನ್ ಡಿ ತುಂಬಾ ಅಗತ್ಯ. ಇಲ್ಲವಾದರೆ ದೇಹದಲ್ಲಿ ಹಲವು ಸಮಸ್ಯೆಗಳು ಕಾಡುತ್ತವೆ. ನಿಮ್ಮ ದೇಹದಲ್ಲಿ ವಿಟಮಿನ್ ಡಿ ಕೊರತೆ ಇರುವುದು ಈ ಲಕ್ಷಣಗಳಿಂದ ತಿಳಿದುಕೊಂಡು ಅದನ್ನು ನಿವಾರಿಸಿಕೊಳ್ಳಿ.
ವಿಟಮಿನ್ ಡಿ ಕೊರತೆಯ ಲಕ್ಷಣಗಳು :
*ಮೂಳೆ ಮತ್ತು ಸ್ನಾಯು ದೌರ್ಬಲ್ಯ, ನಡೆಯುವಾಗ ಮಂಡಿಯೂರಿ ಕಾಣಿಸಿಕೊಳ್ಳುತ್ತದೆ.
*ಶೀಘ್ರದಲ್ಲೇ ದಣಿವು, ಚಡಪಡಿಕೆ, ಕಿರಿಕಿರಿ ಉಂಟಾಗುತ್ತದೆ.
*ಕೂದಲು ಉದುರುವುದು, ಅನಿಯಮಿತ ಮುಟ್ಟಿನ ಸಮಸ್ಯೆ, ರೋಗ ನಿರೋಧಕ ಶಕ್ತಿ ದುರ್ಬಲವಾಗುವುದು.
*ಬಂಜೆತನ ಸಮಸ್ಯೆ, ನೆನಪಿನ ಶಕ್ತಿ ದುರ್ಬಲವಾಗುವುದು.
ಇಂತಹ ಸಮಸ್ಯೆಗಳು ಕಂಡುಬಂದಾಗ ಆಹಾರದಲ್ಲಿ ಮೊಟ್ಟೆ, ಮೀನು, ಹಸಿರು ತರಕಾರಿ, ಹಾಲಿನ ಉತ್ಪನ್ನಗಳನ್ನು ಸೇವಿಸಿ. ಹಾಗೇ ಪ್ರತಿದಿನ ಸೂರ್ಯನ ಬಿಸಿಲಿನಲ್ಲಿ ಇರುವುದರಿಂದ ವಿಟಮಿನ್ ಡಿ ಕೊರತೆ ನಿವಾರಣೆಯಾಗುತ್ತದೆ.