ಬೆಂಗಳೂರು : ಸೀ ಪುಡ್ ಎಂದರೆ ಎಲ್ಲರೂ ಇಷ್ಟಪಡುತ್ತಾರೆ. ಇದು ರುಚಿಕರವಾಗಿರುವುದು ಮಾತ್ರವಲ್ಲ ಇದು ಬೇಗನೇ ಮಕ್ಕಳ ಪಡೆಯಬೇಕೆಂಬುವವರಿಗೆ ಉತ್ತಮವಾದ ಮದ್ದು ಕೂಡ ಹೌದಂತೆ.
ಸೀ ಫುಡ್ ಸೇವಿಸುವ ದಂಪತಿಗಳ ಲೈಂಗಿಕ ಸಾಮರ್ಥ್ಯ, ವೀರ್ಯಾಣು ಸಾಮರ್ಥ್ಯ ಹೆಚ್ಚುತ್ತದೆ. ಇದರಿಂದ ಬೇಗನೇ ಮಕ್ಕಳ ಪಡೆಯಬಹುದು ಎಂದು ಅಧ್ಯಯನ ವರದಿಯೊಂದು ಹೇಳಿದೆ. ಆದ್ದರಿಂದ ಬೇಗನೆ ಗರ್ಭ ಧರಿಸಬೇಕೆನ್ನುವ ದಂಪತಿಗಳು ತಮ್ಮ ಆಹಾರದಲ್ಲಿ ಹೆಚ್ಚು ಸೀಫುಡ್ ಸೇವಿಸಬೇಕಂತೆ.
ಇತರ ಆಹಾರ ಸೇವಿಸುವ ದಂಪತಿಗಳಿಗೆ ಹೋಲಿಸಿದರೆ ಸೀಫುಡ್ ಸೇವಿಸುವ ದಂಪತಿಗಳು ಹೆಚ್ಚು ಲೈಂಗಿಕ ಕ್ರಿಯೆ ಮಾಡುತ್ತಾರಲ್ಲದೆ, ಬೇಗನೇ ಪ್ರೆಗ್ನೆಂಟ್ ಆಗುತ್ತಾರೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ.