ಸರಿಯಾದ ನಿದ್ರೆ ದೇಹದ ತೂಕ ಕಡಿಮೆ ಮಾಡುತ್ತದೆಯೆ?

ಸೋಮವಾರ, 11 ಜೂನ್ 2018 (12:47 IST)
ಬೆಂಗಳೂರು : ನಿದ್ರೆ ಪ್ರತಿ ಮನುಷ್ಯನಿಗೆ ಬೇಕೆಬೇಕು. ಆದರೆ ನಿದ್ರೆ ಜಾಸ್ತಿ ಮಾಡಿದರೆ ಸಮಸ್ಯೆಯೇ, ಅಂದಮಾತ್ರಕ್ಕೆ  ಕಡಿಮೆ ಮಾಡಿದರೂ ಕೂಡ ಅದು  ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಮನುಷ್ಯ 7-8 ಗಂಟೆಗಳ ನಿದ್ರಿಸಬೇಕು. ಇದು ಆರೋಗ್ಯಕ್ಕೆ ಉತ್ತಮ ಎಂದು ಕೂಡ ವೈದ್ಯರು ಹೇಳುತ್ತಾರೆ.


ನಿದ್ರೆಯು ಸರಿಯಾಗಿದ್ದರೆ ಇದು ನಿಮ್ಮ ಕ್ಯಾಲೋರಿಯನ್ನು ಕರಗಿಸಲು ಸಹಾಯಕವಾಗಿದೆ. ಯಾರು ಸರಿಯಾಗಿ ವಿರಾಮ ತೆಗೆದುಕೊಳ್ಳುತ್ತಾರೋ, ಅವರು ವಿರಾಮ ತೆಗೆದುಕೊಳ್ಳದೇ ಇರುವವರಿಗಿಂತ ಶೇಕಡಾ 5 ರಷ್ಟು ಹೆಚ್ಚು ಪ್ರಮಾಣದ ಶಕ್ತಿಯನ್ನು ಕರಗಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಅನ್ನುವುದನ್ನು ಅಧ್ಯಯನವೊಂದು ಬಹಿರಂಗ ಪಡಿಸಿದೆ. ಸರಿಯಾಗಿ ನಿದ್ದೆ ಮಾಡುವ ವ್ಯಕ್ತಿಯು ಶೇಕಡಾ 20 ರಷ್ಟು ಕ್ಯಾಲೋರಿಯನ್ನು ಊಟದ ನಂತರ ಕರಗಿಸಲು ಸಾಧ್ಯವಿದೆ. ಆದರೆ ಅತಿಯಾಗಿ ನಿದ್ರಿಸುವವರಲ್ಲಿ ಫ್ಯಾಟ್ ಸೆಲ್ ಗಳು ಕಡಿಮೆ ಸೂಕ್ಷ್ಮ ಮತಿಗಳಾಗುತ್ತವೆ ಮತ್ತು ಚುರುಕಾಗಿ ಇರುವುದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ