ಬೆಂಗಳೂರು : ಜ್ವರದಲ್ಲಿ ಹಲವು ಬಗೆಗಳಿವೆ. ಇಂತಹ ಯಾವುದೇ ರೀತಿಯ ಜ್ವರ ಬಂದರೂ ತಕ್ಷಣ ನಿವಾರಣೆಯಾಗಲು ಈ ಒಂದೇ ಒಂದು ಮನೆಮದ್ದನ್ನು ಬಳಸಿ.
ಸಾಮಾನ್ಯ ಜ್ವರಕ್ಕೆ ಒಂದು ಲೋಟ ಬಿಸಿ ನೀರಿಗೆ ½ ನಿಂಬೆ ಹಣ್ಣಿನ ರಸವನ್ನು ಮಿಕ್ಸ್ ಮಾಡಿ ಕುಡಿಯಿರಿ. ಹಾಗೇ ನಿಂಬೆ ರಸಕ್ಕೆ 2 ಚಮಚ ಸಕ್ಕರೆ ಬೆರೆಸಿ ಸ್ವಲ್ಪ ಬಿಸಿ ಮಾಡಿ ತಿನ್ನುವುದರಿಂದ ಪಿತ್ತದ ಜ್ವರ ನಿವಾರಣೆಯಾಗುತ್ತದೆ. 1 ಚಮಚ ನಿಂಬೆ ರಸ ಹಾಗೂ 1 ಚಮಚ ಕಿರಾತದ ಕಷಾಯವನ್ನು ಸೇರಿಸಿ ಕುಡಿಯುವುದರಿಂದ ಋತುಮಾನದ ಜ್ವರ ವಾಶಿಯಾಗುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ½ ನಿಂಬೆ ಹಣ್ಣಿನರಸ ಸೇರಿಸಿ ಕುಡಿಯುವುದರಿಂದ ವಿಷಮಶೀತ ಜ್ವರ ಕಡಿಮೆಯಾಗುತ್ತದೆ.