ಜೀರಿಗೆ, ಸೋಂಪು, ಓಂಕಾಳಿನಲ್ಲಿ ಹೆಚ್ಚಿನ ನಾರಿನಾಂಶವಿದೆ. ಇದು ಜೀರ್ಣಕ್ರಿಯೆಯ ಹಲವು ಸಮಸ್ಯೆಗೆ ಇದು ಮದ್ದು. 2 ಚಮಚ ಜೀರಿಗೆ, 2 ಚಮಚ ಸೋಂಪು, 2 ಚಮಚ ಓಂಕಾಳನ್ನು ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ಅದಕ್ಕೆ ½ ಚಮಚ ಕಪ್ಪು ಉಪ್ಪನ್ನು ಮಿಕ್ಸ್ ಮಾಡಿ ಪುಡಿ ಮಾಡಿಕೊಳ್ಳಿ.
ಪ್ರತಿದಿನ ರಾತ್ರಿ ಊಟ ಆದ 1 ಗಂಟೆಯ ನಂತರ ಸ್ವಲ್ಪ ಉಗುರು ಬೆಚ್ಚಗಿನ ನೀರಿನಲ್ಲಿ ½ ಚಮಚ ಈ ಪುಡಿಯನ್ನು ಮಿಕ್ಸ್ ಮಾಡಿ ಕುಡಿಯಿರಿ. ಹೀಗೆ ಮಾಡಿದರೆ ಪ್ರತಿದಿನ ಮಲ ವಿಸರ್ಜನೆಯಾಗುತ್ತದೆ.