ಬೆಂಗಳೂರು : ಅತಿಯಾದ ಚಿಂತೆ, ಒತ್ತಡದ ಜೀವನ, ಆಹಾರ ಪದ್ಧತಿಯಿಂದ ಕೆಲವರ ಕೂದಲು ವಯಸ್ಸಾಗುವ ಮುಂಚೆಯೇ ಬೆಳ್ಳಗಾಗುತ್ತದೆ. ಇದಕ್ಕೆ ಕೆಮಿಕಲ್ ಯುಕ್ತ ಬಣ್ಣಗಳನ್ನು ಹಚ್ಚುವ ಬದಲು ನೈಸರ್ಗಿಕವಾದ ವಸ್ತುಗಳನ್ನು ಬಳಸಿ ಕೂದಲನ್ನು ಕಪ್ಪಾಗಿಸಿ.
ಹೀರೇಕಾಯಿಯನ್ನು ತೆಂಗಿನೆಣ್ಣೆಯೊಂದಿಗೆ 3-4 ಗಂಟೆಗಳ ಕಾಲ ಕುದಿಸಬೇಕು. ಆಗ ಎಣ್ಣೆ ಕಪ್ಪು ಬಣ್ಣಕ್ಕೆ ಬಂದಾಗ ಅದನ್ನು ತಣ್ಣಗಾಗಿಸಿ ಒಂದು ಗಾಜಿನ ಬಾಟಲಿನಲ್ಲಿ ಶೇಖರಿಸಿಡಿ. ಈ ಎಣ್ಣೆಯನ್ನು ಪ್ರತಿದಿನ ಕೂದಲಿಗೆ ಹಚ್ಚಿದರೆ ಕೂದಲು ಬೇಗ ಕಪ್ಪಾಗುತ್ತದೆ.
ಆಲಿವ್ ಆಯಿಲ್ ಹಾಗೂ ಎಳ್ಳಿನ ಎಣ್ಣೆಯೊಂದಿಗೆ ಕುಂಬಳಕಾಯಿ ರಸವನ್ನು ಬೇರೆಸಿ. ಈ ಎಣ್ಣೆಯನ್ನು ದಿನಕ್ಕೆ 2 ಬಾರಿ ಕೂದಲಿಗೆ ಹಚ್ಚಿ ಮಸಾಜ್ ಮಾಡಿದರೆ ಬಿಳಿ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ.