ಬೆಂಗಳೂರು: ಗುಪ್ತಾಂಗದ ಕೂದಲು ಕತ್ತರಿಸುವ ಬಗ್ಗೆ ಹಲವರಲ್ಲಿ ಹಲವು ಅನುಮಾನಗಳಿರುತ್ತವೆ. ಇಲ್ಲಿ ಕೂದಲು ಒಮ್ಮೆ ಕತ್ತರಿಸಿದರೆ ಬೇಗನೇ ಬೆಳೆಯುತ್ತದೆ ಎನ್ನುವ ಕಲ್ಪನೆ ಕೆಲವರಿಗಿರುತ್ತದೆ.
ನಿಜವಾಗಿಯೂ ಗುಪ್ತಾಂಗದಲ್ಲಿ ಒಮ್ಮೆ ಕೂದಲು ತೆಗೆದರೆ ಶರೀರದ ಇತರ ಭಾಗಕ್ಕಿಂತ ಬೇಗನೇ ಬೆಳೆಯುತ್ತದಾ? ತಜ್ಞರ ಪ್ರಕಾರ ಹಾಗೇನೂ ಇಲ್ಲ. ಇದು ನಮ್ಮ ಭ್ರಮೆಯಷ್ಟೇ.
ಯಾಕೆಂದರೆ ಗುಪ್ತಾಂಗದ ಬಗ್ಗೆ ನಾವು ಹೆಚ್ಚು ಗಮನಕೊಡುತ್ತಿರುತ್ತೇವೆ. ಹೀಗಾಗಿ ನಮಗೆ ಹಾಗೆ ಅನಿಸುವುದು ಸಹಜ. ತಲೆಕೂದಲುಗಳನ್ನೇ ಆದರೂ ಪೂರ್ತಿ ಬೋಳಿಸಿದರೆ ಕೆಲವೇ ದಿನದಲ್ಲಿ ಕೂದಲು ಹುಟ್ಟಿಕೊಳ್ಳುತ್ತದಲ್ಲವೇ? ಅದೇ ರೀತಿ ಇದೂ ಕೂಡಾ ಅಷ್ಟೇ.