ಸ್ಮಾರ್ಟ್ ಫೋನ್ ಮಾರಾಟದಲ್ಲಿ ಅಮೆರಿಕವನ್ನು ಹಿಂದಿಕ್ಕಿದ ಭಾರತ

ಶನಿವಾರ, 28 ಅಕ್ಟೋಬರ್ 2017 (17:21 IST)
ನವದೆಹಲಿ: ಅಮೆರಿಕಾಗಿಂತಲೂ ಅತಿ ಹೆಚ್ಚು ಸ್ಮಾರ್ಟ್‌‌ ಫೋನ್‌ ಮಾರಾಟ ಮಾಡಿರುವ ಪಟ್ಟಿಯಲ್ಲಿ ಭಾರತ ವಿಶ್ವದ ದೊಡ್ಡಣ್ಣನನ್ನು ಹಿಂದಿಕ್ಕಿದೆ.

ಸಿಂಗಾಪುರ್ ಮೂಲದ ಟೆಕ್ನಾಲಜಿ ಮಾರುಕಟ್ಟೆ ವಿಶ್ಲೇಷಕ ಕ್ಯಾನಾಲಿಸ್ ಮಾಡಿರುವ ವರದಿ ಪ್ರಕಾರ, 2017ರ 3ನೇ ತ್ರೈಮಾಸಿಕದಲ್ಲಿ ಭಾರತ ಈ ಸಾಧನೆ ಮಾಡಿದೆ. ಈ ವರದಿ ಪ್ರಕಾರ ಭಾರತ ಇದೇ ಮೊದಲ ಬಾರಿಗೆ ಬರೋಬ್ಬರಿ 40 ಮಿಲಿಯನ್‌ ಸ್ಮಾರ್ಟ್‌‌ ಫೋನ್‌‌ ಮಾರಾಟ ಮಾಡಿವ ಮೂಲಕ ಅಮೆರಿಕಾವನ್ನು ಹಿಂದಿಟ್ಟಿದೆಯಂತೆ.

ಆದರೆ ಮೊದಲ ಸ್ಥಾನದಲ್ಲಿ ನೆರೆಯ ಚೀನಾ ಮುಂದುವರಿದಿದ್ದು, ಬರೋಬ್ಬರಿ 110 ಮಿಲಿಯನ್‌ ಗಿಂತಲೂ ಹೆಚ್ಚು ಸ್ಮಾರ್ಟ್‌‌ ಫೋನ್‌‌ ಮಾರಾಟ ಮಾಡಿದೆ.

ಭಾರತದಲ್ಲಿ ಚೀನಾ ಮತ್ತು ದಕ್ಷಿಣ ಕೊರಿಯಾದ ಮೊಬೈಲ್‌‌ ಬ್ರ್ಯಾಂಡ್‌ ಗಳಾದ ಕ್ಸಿಯೋಮಿ ಹಾಗೂ ಸ್ಯಾಮ್‌ ಸಂಗ್‌‌ ಮೊಬೈಲ್‌ ಅತಿ ಹೆಚ್ಚು ಮಾರಾಟಗೊಂಡಿವೆ. ಉಳಿದಂತೆ ವಿವೋ, ಒಪ್ಪೊ, ಲೆನೊವೊ ಮೊಬೈಲ್‌ ಹೆಚ್ಚು ಮಾರಾಟಗೊಂಡಿವೆ.

ಕೆಲ ದಿನಗಳಿಂದ ಭಾರತದಲ್ಲಿ ಆ್ಯಪಲ್‌ ಐಫೋನ್‌ ಸಹ ಹೆಚ್ಚು ಮಾರಾಟಗೊಳ್ಳುತ್ತಿವೆ ಎಂದು ವರದಿಯಲ್ಲಿ ತಿಳಿದು ಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ