ಮಸ್ಕ್ ಸಂಬಂಧ ಕಡಿದುಕೊಳ್ಳಲು ಸಿದ್ಧವಾದ ಮಗಳು!

ಮಂಗಳವಾರ, 21 ಜೂನ್ 2022 (14:30 IST)
ವಾಷಿಂಗ್ಟನ್ : ಖ್ಯಾತ ಉದ್ಯಮಿ ಬಿಲಿಯನೇರ್ ಎಲೋನ್ ಮಸ್ಕ್ ಅವರ ತೃತೀಯ ಲಿಂಗಿ ಮಗಳು ತಮ್ಮ ತಂದೆಯೊಂದಿಗೆ ಸಂಬಂಧ ಕಡಿದುಕೊಳ್ಳಲು ಸಿದ್ಧರಾಗಿದ್ದಾರೆ.

ಆನ್ಲೈನ್ನಲ್ಲಿ ಲಭ್ಯವಿರುವ ನ್ಯಾಯಾಲಯದ ದಾಖಲೆಗಳ ಪ್ರಕಾರ, ಇತ್ತೀಚೆಗೆ ಕ್ಯಾಲಿಫೋರ್ನಿಯಾದಲ್ಲಿ 18 ವರ್ಷ ವಯಸ್ಸಿನ ಕ್ಸೇವಿಯರ್ ಅಲೆಕ್ಸಾಂಡರ್ ಮಸ್ಕ್ ತನ್ನ ಲಿಂಗ ಗುರುತಿಸುವಿಕೆಯನ್ನು ಪುರುಷನಿಂದ ಮಹಿಳೆಗೆ ಬದಲಾಯಿಕೊಂಡಿದ್ದಾರೆ.

ಈ ಹಿನ್ನೆಲೆ ಆಕೆ ತನ್ನ ಮೂಲ ಹೆಸರು, ಹುಟ್ಟಿದ್ದ ಮೂಲ ಮತ್ತು ತಂದೆ ಹೆಸರನ್ನು ಬಿಟ್ಟು, ತನ್ನ ಹೊಸ ಹೆಸರನ್ನು ನೋಂದಾಯಿಸಲು ನ್ಯಾಯಾಲಯವನ್ನು ಕೇಳಿಕೊಂಡಿದ್ದಾಳೆ.

ಈ ಕುರಿತು ಮಾತನಾಡಿದ ಮಸ್ಕ್ ಮಗಳು, ನಾನು ಇನ್ನೂ ಮುಂದೆ ಯಾವ ಸಂಬಂಧದ ಜೊತೆಗೂ ಇರಲು ಇಷ್ಟಪಡುವುದಿಲ್ಲ. ನನ್ನ ಜೈವಿಕ ತಂದೆಯೊಂದಿಗೆ ಯಾವುದೇ ರೀತಿಯಲ್ಲಿ, ಆಕಾರ ಅಥವಾ ರೂಪದಲ್ಲಿ ಸಂಬಂಧ ಹೊಂದಲು ಬಯಸುವುದಿಲ್ಲ ಎಂದು ತಿಳಿಸಿದ್ದಾಳೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ