ರನ್‌ ವೇಯಲ್ಲೇ ಹೊತ್ತಿ ಉರಿದ ವಿಮಾನ,18 ಮಂದಿ ಸಾವು, ಪವಾಡಸದೃಶ ಫೈಲೆಟ್ ಪಾರು

Sampriya

ಬುಧವಾರ, 24 ಜುಲೈ 2024 (16:40 IST)
Photo Courtesy X
ನೇಪಾಳ: ರಾಜಧಾನಿ ಕಠ್ಮಂಡುವಿನಲ್ಲಿ ಟೇಕ್ ಆಫ್ ವೇಳೆ ವಿಮಾನ ನೆಲಕ್ಕೆ ಅಪ್ಪಳಿಸಿ ಹೊತ್ತಿ ಉರಿದ ಪರಿಣಾಮ 18 ಮಂದಿ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ. ಇನ್ನೂ ಅದೃಷ್ಟವಶಾತ್ ವಿಮಾನದ ಪೈಲೆಟ್ ಈ ಘಟನೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಅಪಘಾತದಲ್ಲಿ ಬದುಕುಳಿದ ಫೈಲೆಟ್ ಅವರನ್ನು ಚಿಕಿತ್ಸೆಗಾಗಿ ಕಠ್ಮಂಡು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಪರಿಸ್ಥಿತಿಯೂ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಏರ್‌ಪೋರ್ಟ್‌ನ ವಕ್ತಾರ, ವಿಮಾನ ನಿಲ್ದಾಣದಿಂದ ಟೇಕ್‌ ಆಫ್ ಆಗುವ ವೇಳೆ ವಿಮಾನ ರನ್‌ ವೇಯಲ್ಲೇ ಸ್ಕಿಡ್ ಆಗಿದೆ. ಈ ವೇಳೆ ಒಮ್ಮೆಲೇ ಬೆಂಕಿ ಕಾಣಿಸಿಕೊಂಡು ವಿಮಾನ ಹೊತ್ತಿ ಉರಿದಿದೆ. ಇದರಿಂದ ಕ್ಯಾಬಿನ್‌ ಸಿಬ್ಬಂದಿ ಹಾಗೂ ತಾಂತ್ರಿಕ ಸಿಬ್ಬಂದಿ ಸೇರಿದಂತೆ 18 ಮಂದಿ ಸಾವನ್ನಪ್ಪಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಬಿಗಿ ಭದ್ರತೆ ಒದಗಿಸಲಾಗಿದ್ದು, ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಸದ್ಯ ಸಾಮಾಜಿಕ ಜಾಲತಾಣದಕಲ್ಲಿ, ನೇಪಾಳ ರಾಜಧಾನಿ ಕಠ್ಮಂಡು ನಗರದಲ್ಲಿ ಇರುವ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ದಟ್ಟ ಹೊಗೆ ಆಗಸಕ್ಕೆ ಚಿಮ್ಮುತ್ತಿರುವ ವಿಡಿಯೋ ದೃಶ್ಯ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ