Sunita Williams: ಮನೆಗೆ ಬಂದ ಸುನಿತಾ ವಿಲಿಯಮ್ಸ್ ರನ್ನು ಮುದ್ದಿನ ಶ್ವಾನಗಳು ಸ್ವಾಗತಿಸಿದ ಪರಿ ವಿಡಿಯೋ ನೋಡಿ
ಸುನಿತಾ ವಿಲಿಯಮ್ಸ್ ಭೂಮಿಗೆ ಬಂದ ಬಳಿಕ ಕೆಲವು ದಿನ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. 9 ತಿಂಗಳು ಬಾಹ್ಯಾಕಾಶದಲ್ಲಿದ್ದ ಅವರಿಗೆ ಭೂಮಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಕೆಲವು ಸಮಯ ಬೇಕಾಯಿತು.
ಇದೀಗ ಆರೋಗ್ಯವಾಗಿ ಹೊರಗಡೆ ಬಂದಿರುವ ಸುನಿತಾ ವಿಲಿಯಮ್ಸ್ ಮೊದಲ ಬಾರಿಗೆ ಮನೆಗೆ ಬಂದಿದ್ದಾರೆ. ಅಮೆರಿಕಾದ ತಮ್ಮ ಮನೆಗೆಬಂದಾಗ ಅವರ ಸಾಕು ನಾಯಿಗಳು ಅಪ್ಪಿ ಮುದ್ದಾಡಿವೆ. ತಮ್ಮ ಒಡತಿಯನ್ನು ಪ್ರೀತಿಯಿಂದ ಸ್ವಾಗತಿಸಿವೆ.
ಬಹಳ ದಿನಗಳ ನಂತರ ತಮ್ಮ ಮುದ್ದಿನ ಶ್ವಾನಗಳನ್ನು ಕಂಡು ಸುನಿತಾ ಕೂಡಾ ಭಾವುಕರಾಗಿದ್ದಾರೆ. ಸುನಿತಾ ಕೂಡಾ ಆ ನಾಯಿಗಳನ್ನು ಮುದ್ದಿಸಿ ತಮ್ಮ ಖುಷಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.