ಹಸೀನ್ ಬಾಂಗ್ಲಾ ಬಿಟ್ಟ ಮೇಲೆ ಹೆಚ್ಚಿದ ಹಿಂಸಾಚಾರ: ಮಾಜಿ ಕ್ರಿಕೆಟಿಗ, ಸಂಸದ ಮಶ್ರಫೆ ಮನೆಗೆ ಬೆಂಕಿ

Sampriya

ಮಂಗಳವಾರ, 6 ಆಗಸ್ಟ್ 2024 (14:22 IST)
Photo Courtesy X
ಬಾಂಗ್ಲಾದೇಶ: ಪ್ರಧಾನಿ ಸ್ಥಾನಕ್ಕೆ ಶೇಖ್ ಹಸೀನ್ ಅವರು ರಾಜೀನಾಮೆ ಸಲ್ಲಿಸಿ, ದೇಶ ತೊರೆಯುತ್ತಿದ್ದ ಹಾಗೇ ಬಾಂಗ್ಲಾದಲ್ಲಿ ಪ್ರತಿಭಟನೆ ಕಾವು ಜೋರಾಗಿ 100ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

ಈ ವೇಳೆ ಬಾಂಗ್ಲಾದೇಶದ ಮಾಜಿ ಕ್ರಿಕೆಟ್, ಸಂಸದ ನಾಯಕ ಮಶ್ರಫೆ ಬಿನ್ ಮೊರ್ತಾಜಾ ಅವರ ಮನೆಗೆ ಬೆಂಕಿ ಹಚ್ಚಲಾಗಿದೆ ಎಂದು ವರದಿಯಾಗಿದೆ.

ಅವಾಮಿ ಲೀಗ್ ಪಕ್ಷದ ಸಂಸದರಾಗಿರುವ ಮಶ್ರಫೆ ಅವರು ಎರಡನೇ ಬಾರಿ ಸಂಸತ್‌ಗೆ ಆಯ್ಕೆಯಾಗಿದ್ದಾರೆ. ಬೃಹತ್ ವಿದ್ಯಾರ್ಥಿಗಳ ಪ್ರತಿಭಟನೆಯ ಹಿನ್ನೆಲೆಯಲ್ಲಿ ಶೇಖ್ ಹಸೀನಾ (76) ಅವರು ದೇಶವನ್ನು ತೊರೆದ ನಂತರ ವಿಧ್ವಂಸಕರು ಮಶ್ರಫೆ ಮೊರ್ತಾಜಾ ಅವರ ಮನೆಗೆ ದಾಳಿ ಮಾಡಿ ಬೆಂಕಿ ಹಚ್ಚಿದ್ದಾರೆ ಎಂದು ಬಾಂಗ್ಲಾದೇಶ ಮಾಧ್ಯಮ ವರದಿ ಮಾಡಿದೆ.

ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ಮಶ್ರಫೆ ಮೊರ್ತಾಜಾ 2018 ರಲ್ಲಿ ಶೇಖ್ ಹಸೀನಾ ಅವರ ಅವಾಮಿ ಲೀಗ್‌ಗೆ ಸೇರುವ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದರು ಮತ್ತು ನರೈಲ್ -2 ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ