ವಿರಾಟ್ ಕೊಹ್ಲಿ-ಎಬಿಡಿ ವಿಲಿಯರ್ಸ್ ನಿಷೇಧಿಸಿ: ಕೆಎಲ್ ರಾಹುಲ್ ಆಗ್ರಹ!

ಗುರುವಾರ, 15 ಅಕ್ಟೋಬರ್ 2020 (09:47 IST)
ದುಬೈ: ಐಪಿಎಲ್ ನಿಂದ ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ನಿಷೇಧಿಸಬೇಕು ಎಂದು ಕಿಂಗ್ಸ್ ಇಲೆವೆನ್ ಪಂಜಾ‍ಬ್ ನಾಯಕ ಕೆಎಲ್ ರಾಹುಲ್ ಆಗ್ರಹಿಸಿದ್ದಾರೆ! ಅಷ್ಟಕ್ಕೂ ರಾಹುಲ್ ಹೀಗೆ ಹೇಳಿದ್ದೇಕೆ ಗೊತ್ತಾ?


ಇಂದು ಆರ್ ಸಿಬಿ-ಪಂಜಾಬ್ ನಡುವೆ ಪಂದ್ಯ ನಡೆಯಲಿದ್ದು, ಪಂಜಾಬ್ ನಾಯಕನಿಗೆ ಆರ್ ಸಿಬಿಯ ಈ ಸ್ಟಾರ್ ಜೋಡಿಗಳನ್ನು ಎದುರಿಸುವುದೇ ಚಿಂತೆ. ಹೀಗಾಗಿ ತಮಾಷೆಯಾಗಿ ಮಾಧ್ಯಮದವರ ಎದುರು ರಾಹುಲ್ ಹೀಗೆ ಹೇಳಿಕೆ ನೀಡಿದ್ದಾರೆ.

‘ಇಬ್ಬರೂ ಐಪಿಎಲ್ ನಲ್ಲಿ 5000 ಪ್ಲಸ್ ರನ್ ಗಳಿಸಿದ್ದಾರೆ. ಇಷ್ಟು ಸಾಧನೆ ಮಾಡಿದ ಮೇಲೆ ಸಾಕು ಎನಿಸಬೇಕು. ಮುಂದಿನ ವರ್ಷ ಇಬ್ಬರನ್ನೂ ನಿಷೇಧಿಸಬೇಕು. ಬೇರೆಯವರಿಗೂ ಕೆಲಸ ಮಾಡಲು ಅವಕಾಶ ಕೊಡಲಿ’ ಎಂದು ರಾಹುಲ್ ತಮಾಷೆಯಾಗಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ