ಸ್ಯಾಂಡಲ್ ವುಡ್ ನಲ್ಲಿ ನಂಗೆ ನೀನೇ ಫೇವರಿಟ್ ಎಂದು ರಮ್ಯಾ ಹೇಳಿದ್ದು ಯಾರಿಗೆ?

ಗುರುವಾರ, 29 ಅಕ್ಟೋಬರ್ 2020 (10:44 IST)
ಬೆಂಗಳೂರು: ನಟಿ ರಮ್ಯಾಗೆ ಸ್ಯಾಂಡಲ್ ವುಡ್ ನಲ್ಲಿ ಕೆಲವೇ ಕೆಲವು ಸ್ನೇಹಿತರಿದ್ದಾರೆ. ಆದರೆ ಎಲ್ಲರಿಗಿಂತ ನನಗೆ ನೀನೇ ಫೇವರಿಟ್ ಎಂದು ರಮ್ಯಾ ಹೇಳಿದ್ದು ಈ ನಟಿಗೆ.


ಅವರು ಬೇರೆ ಯಾರೂ ಅಲ್ಲ ನಟಿ ಶರ್ಮಿಳಾ ಮಾಂಡ್ರೆ. ಗಾಳಿಪಟ ಬೆಡಗಿ ಶರ್ಮಿಳಾ ನಿನ್ನೆ ಬರ್ತ್ ಡೇ ಆಚರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಶರ್ಮಿಳಾಗೆ ಶುಭಾಷಯ ತಿಳಿಸಿರುವ ರಮ್ಯಾ ಸ್ಯಾಂಡಲ್ ವುಡ್ ನ ಎಲ್ಲರ ಪೈಕಿ ನನಗೆ ನೀನು ಫೇವರಿಟ್. ಮತ್ತೆ ನಿಮ್ಮ ಜತೆ ಸುತ್ತಾಡಬೇಕೆನಿಸುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇನ್ನು, ರಮ್ಯಾ ಹೊಗಳಿಕೆಗೆ ಪ್ರತಿಕ್ರಿಯಿಸಿರುವ ಶರ್ಮಿಳಾ ‘ನೀನೇ ಬೆಸ್ಟ್’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ